ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ಸ್ ಸಂಘದಿಂದ 17ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಪ್ರತಿಭಟನೆ

ಬೆಂಗಳೂರು,ಡಿ.11-ಅಧಿಕಾರಿಗಳ ಕಿರುಕುಳ, ಭಾರೀ ಪ್ರಮಾಣದ ದಂಡ ರದ್ದುಪಡಿಸುವುದು ಸೇರಿದಂತೆ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆಡರೇಷನ್ ಆಫ್ ಕ್ವಾರಿ ಅಂಡ್ ಸ್ಟೋನ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್ಸ್ ಇದೇ 17 ರಂದು ಬೆಳಗಾವಿಯ ಸುವರ್ಣ ಸೌಧದ ಮುಂಭಾಗ ರಾಜ್ಯದ ಮಟ್ಟದ ಭಾರೀ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ಸ್ ಅಧ್ಯಕ್ಷ ಸಂಜೀವ್ ಹಟ್ಟಿಹೊಳೆ, ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರನ್ನು ರಾಜ್ಯ ಸರ್ಕಾರ ಸುಲಿಗೆ ಮಾಡುತ್ತಿದೆ. ಡ್ರೋಣ್ ಕ್ಯಾಮರಾ ಮೂಲಕ ಸಮೀಕ್ಷೆ ನಡೆಸಿ ಅವೈe್ಞನಿಕ ಮತ್ತು ಭಾರೀ ಪ್ರಮಾಣದಲ್ಲಿ ದಂಡ ವಿಧಿಸುತ್ತಿದ್ದು, ಇದೊಂದು ರೀತಿ ಸರ್ಕಾರವೇ ಹಗಲು ದರೋಡೆ ಮಾಡಿದಂತಾಗಿದೆ. ಇದನ್ನು ವಿರೋಧಿಸಿ ಈವರೆಗೆ ಹಲವು ಭಾರಿ ಪ್ರತಿಭಟನೆ ನಡೆಸಿದ್ದು, ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಿಲ್ಲ. ಈ ಬಾರಿಯ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಬೇಡಿಕೆ ಈಡೇರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಾವು ರಾಜ್ಯ ಮತ್ತು ರಾಷ್ಟ್ರದ ಪ್ರಗತಿಗೆ ಪೂರಕವಾದ ಕಲ್ಲುಗಳನ್ನು ಪೂರೈಕೆ ಮಾಡುತ್ತಿದ್ದು, ದೇಶದ ಅಭ್ಯುದಯಲ್ಲಿ ಪಾಲುದಾರರಾಗಿದ್ದೇವೆ. ಆದರೆ ಸರ್ಕಾರ ನಮ್ಮ ಬದುಕಿನ ಮೇಲೆ ಕಲ್ಲು ಎತ್ತಿ ಹಾಕುವ ಕೆಲಸ ಮಾಡುತ್ತಿದೆ. ದಿನಕ್ಕೊಂದು ಹೊಸ ಕಾನೂನುಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. ಇದರಿಂದ ಅನಗತ್ಯ ಗೊಂದಲ, ಕಿರಿಕಿರಿ, ತೊಂದರೆ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಡ್ರೋಣ ಸರ್ವೆ ಮೂಲಕ ಐದು ಪಟ್ಟು ದಂಡ ವಿಧಿಸಲಾಗುತ್ತಿದ್ದು, ದಂಡ ಪಾವತಿ ಮಾಡಲು ಸಾಧ್ಯವಾಗದೇ ಮಾಲೀಕರು ಪರಿತಪಿಸುತ್ತಿದ್ದಾರೆ. ನಮ್ಮನ್ನು ಗಣಿ ಉದ್ಯಮಿಗಳು ಎಂದು ಪರಿಗಣಿಸಿದ್ದಾರೆ. ಆದರೆ ಕಟ್ಟಡಗಳಿಗೆ ಕಲ್ಲು ಪೂರೈಕೆ ಮಾಡುವ ಉದ್ಯಮ ನಮ್ಮದು. ಆದರೆ ಅಧಿಕಾರಿಗಳು ಇಡೀ ಉದ್ಯಮವನ್ನೇ ಅಧಿಕಾರಿಗಳು ಹಾಳು ಮಾಡಲು ಹೊರಟಿದ್ದಾರೆ. ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಕ್ರಷರï ಸಿ ಫಾರ್ಮ ನ್ನು 20 ವರ್ಷಗಳಿಗೆ ವಿಸ್ತರಿಸಬೇಕು. ನಂತರ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿಯಿಂದ ನವೀಕರಣ ಮಾಡಿಸಿಕೊಡುವ ವ್ಯವಸ್ಥೆ ರೂಪಿಸಬೇಕು. ಕಟ್ಟಡದ ಕಲ್ಲನ್ನು ಸಣ್ಣ ಖನಿಜ ಎನ್ನುವ ವ್ಯಾಪ್ತಿಯಿಂದ ತೆಗೆದು ಅವಶ್ಯಕ ವಸ್ತುಗಳ ವ್ಯಾಪ್ತಿಗೆ ತರಬೇಕು. ಕಲ್ಲು ಗಣಿ ಗುತ್ತಿಗೆಯನ್ನು 30 ವರ್ಷಗಳ ವರೆಗೆ ವಿಸ್ತರಿಸಿ, ಕಟ್ಟಡ ಕಲ್ಲಿಗೆ ಎಂಡಿಪಿಯನ್ನು ತೆಗೆದುಹಾಕಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮï, ಉಪಾಧ್ಯಕ್ಷರಾದ ಡಿ ಸಿದ್ದರಾಜು, ಮಂಜುನಾಥï, ಕಾರ್ಯದರ್ಶಿ ಭಾಸ್ಕರï, ಸಂಘಟನಾ ಕಾರ್ಯದರ್ಶಿ ಕೆ.ವಿ. ಚೌಧರಿ ಮತ್ತಿತರರು ಪಾಲ್ಗೊಂಡಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ