ಮುಖ್ಯಮಂತ್ರಿಯನ್ನೇ ಸೋಲಿಸಿದ ಮಿಜೋರಾಂ ಮತದಾರರು!

ಐಜಾಲ್: ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಅತ್ತ ಮಿಜೋರಾಂ ನಲ್ಲಿ ಹಾಲಿ ಸಿಎಂ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಾಲ್ ಥನ್ವಾಲಾ ಅವರು ಸೋಲು ಕಂಡಿದ್ದಾರೆ.

ಮಿಜೋರಾಂನ ತಮ್ಮ ಸ್ವಕ್ಷೇತ್ರ ದಕ್ಷಿಣ ಚಾಂಪೈನಲ್ಲೇ ಮುಖ್ಯಮಂತ್ರಿ ಲಾಲ್ ಥನ್ವಾಲಾ ಸೋಲು ಕಂಡಿದ್ದು, ಮಿಜೋ ನ್ಯಾಷನಲ್ ಫ್ರಂಟ್ ಅಭ್ಯರ್ಥಿ ಟಿಜೆ ಲಾಲ್ನಂಟ್ಲುಂಗಾ ಜಯಭೇರಿ ಭಾರಿಸಿದ್ದಾರೆ. ಟಿಜೆ ಲಾಲ್ನಂಟ್ಲುಂಗಾ ಅವರು ಸಿಎಂ ಲಾಲ್ ಥನ್ವಾಲಾ ಅವರನ್ನು 856 ಮತಗಳ ಅಂತರದಲ್ಲಿ ಮಣಿಸಿದ್ದಾರೆ.

ಇನ್ನು ಹಾಲಿ ಚುನಾವಣೆಯಲ್ಲಿ ಎಂಎನ್ಎಫ್ ಪಕ್ಷ ಸ್ಪಷ್ಟ ಬಹುಮತ ಪಡೆದಿದ್ದು, ಒಟ್ಟು 40 ಕ್ಷೇತ್ರಗಳ ಪೈಕಿ ಎಂಎನ್ಎಫ್ 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಮಿಜೋರಾಂನಲ್ಲಿ ಎಂಎನ್ಎಫ್ ಸರ್ಕಾರ ರಚನೆ ಮಾಡುವುದು ಖಚಿತವಾಗಿದ್ದು, ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಪಕ್ಷ 5ರಲ್ಲಿ ಮತ್ತು ಬಿಜೆಪಿ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ, ಇತರರು 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದೊಕೊಂಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ