ಮಧ್ಯಪ್ರದೇಶದಲ್ಲಿ ಹಾವು-ಏಣಿ ಆಟ; ಕಾಂಗ್ರೆಸ್ – ಬಿಜೆಪಿ ನಡುವೆ ತುರುಸಿನ ಪೈಪೋಟಿ

ಭೋಪಾಲ್​: ಕ್ಷಣಕ್ಷಣಕ್ಕೂ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಕುತೂಹಲ ಮೂಡಿಸುತ್ತಿದ್ದು, ಬೆಳಗ್ಗೆಯಿಂದ ಮುನ್ನಡೆಯತ್ತ ಕಾಂಗ್ರೆಸ್​ ಇದೀಗ ಇಳಿಕೆ ಕ್ರಮದಲ್ಲಿ ಸಾಗಿದೆ. ಒಂದೊಮ್ಮೆ 115ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದ ಕಾಂಗ್ರೆಸ್​ ಸದ್ಯ 108 ಸ್ಥಾನಗಳಿಗೆ ಕುಸಿತ ಕಂಡಿದೆ.

ಇತ್ತ ಆಡಳಿತರೂಢ ಬಿಜೆಪಿ ಪಕ್ಷ ಮ್ಯಾಜಿಕ್​ ನಂಬರ್​ನತ್ತ ದಾಪುಗಾಲಿಟ್ಟಿದ್ದು, 116 ಕ್ಷೇತ್ರಗಳ ಪೈಕಿ 114 ಕ್ಷೇತ್ರಗಳಲ್ಲಿ ತನ್ನ ಹಿಡಿತ ಸಾಧಿಸಿದೆ. ಮ್ಯಾಜಿಕ್​ ನಂಬರ್ ತಲುಪಲು ಕೇವಲ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವುದು ಅವಶ್ಯವಿದೆ.
ಆಡಳಿತರೂಢ ವಿರೋಧಿ ಅಲೆ ನಡುವೆ ಕೂಡ ಶಿವರಾಜ್​ ಸಿಂಗ್ ಚೌಹಾಣ್​ ತಮ್ಮ ಅಸ್ಥಿತ್ವ ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  ಮತ ಎಣಿಕೆ ಆರಂಭ ಆದಾಗಿನಿಂದಲೇ ಕಾಂಗ್ರೆಸ್​ – ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.   ಆದರೆ ಕಾಂಗ್ರೆಸ್ ಅಲ್ಪ ಮುನ್ನಡೆ ಗಳಿಸಿತು. ಅದಾದ ಬಳಿಕ ಮತ್ತೆ ಬಿಜೆಪಿ ಮುನ್ನಡೆಗಳಿಸಿತು.
ಇನ್ನೇನು ಬಿಜೆಪಿ ನೂರರ ಗಡಿದಾಟಿತು ಎನ್ನುವಾಗಲೇ ಕಾಂಗ್ರೆಸ್​ ಮ್ಯಾಜಿಕ್​ ನಂಬರ್ ತಲುಪಿಯೇ ಬಿಟ್ಟಿತು. ಕಾಂಗ್ರೆಸ್​ ಮಧ್ಯಪ್ರದೇಶ ವಶಪಡಿಸಿಕೊಂಡಿತು ಎನ್ನುವಾಗಲೇ, ಬಿಜೆಪಿ ಮುನ್ನಡೆ ಗಳಿಸುವ ಮೂಲಕ ಫಲಿತಾಂಶ ಎರಡೂ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು, ಫ್ಯಾನ್ಸ್​ಗಳನ್ನ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು.
ಸತತ 15 ವರ್ಷಗಳ ಆಡಳಿತ ನಡೆಸಿ, ಆಡಳಿತ ವಿರೋಧಿ ಅಲೆ ಇದ್ದರೂ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರಲು ಶಿವರಾಜ್​ ಸಿಂಗ್​ ಚೌಹಾಣ್​ ಹರಸಾಹಸ ಮಾಡುತ್ತಿದ್ದಾರೆ. ಅಂತಿಮ ಫಲಿತಾಂಶ ಏನ್​ ಆಗುತ್ತೋ ಅನ್ನೋದಕ್ಕೆ ಮಧ್ಯಾಹ್ನ ಎರಡರವರೆಗೂ ಕಾಯಲೇಬೇಕಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ