ಕಾಬೂಲ್‍ನಲ್ಲಿ ಬಾಂಬ್ ಸ್ಪೋಟ ನಾಲ್ವರು ಭದ್ರತಾ ಸಿಬ್ಬಂಧಿಗಳ ಸಾವು

ಕಾಬೂಲ್: ಆಪ್ಘಾನಿಸ್ಥಾನದ ರಾಜಧಾನಿ ಕಾಬೂಲ್‍ನ ಹೊರವಲಯದಲ್ಲಿ ಭದ್ರತಾ ಸಿಬ್ಬಂಧಿಗಳ ಮೇಲೆ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯ ಸ್ಪೋಟಕ್ಕೆ ನಾಲ್ವರು ಭದ್ರತಾ ಸಿಬ್ಬಂಧಿಗಳು ಮೃತಪಟ್ಟು ಆರು ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ಉಪ ವಕ್ತಾರ ನಸ್ರತ್ ರಹೀಮಿ ಹೇಳಿದರು. ಸಧ್ಯಕ್ಕೆ ಈ ದಾಳಿಯ ಹೊಣೆಯನ್ನು ಯಾವ ಸಂಘಟನೆಗಳು ಹೊತ್ತಿಕೊಂಡಿಲ್ಲ ಎಂದು ಹೇಳಿದರು.

ಕಂದಹಾರನ ದಕ್ಷಿಣ ಪ್ರಾಂತ್ಯದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ 8 ಜನ ಪೊಲೀಸರು ಮೃಪಟ್ಟಿದ್ದಾರೆ ಎಂದು ಪ್ರಾಂತೀಯ ಗವರ್ನರ್ ವಕ್ತಾರ ಅಜೀಜ್ ಅಹಮದ್ ಹೇಳಿದರು. ಈ ಕದನದಲ್ಲಿ 11 ಜನ ಬಂಡಾಯಕೋರರು ಹತ್ಯೆಯಾಗಿದ್ದಾರೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ