ಬೆಂಗಳೂರು, ಡಿ.11- ಸಾರ್ವಜನಿಕರ ಅನುಕೂಲಕ್ಕಾಗಿ ನೈಸ್ ರಸ್ತೆಯಲ್ಲಿ ಮೆಟ್ರೋ ಸಂಚಾರ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಬಿಎಂಆರ್‍ಸಿಎಲ್‍ಗೆ ಸೂಚನೆ ನೀಡಿದೆ.
ಮೊದಲನೆ ಹಂತದಲ್ಲಿ ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್‍ಸಿಟಿ ವರೆಗಿನ ನೈಸ್ ರಸ್ತೆಯಲ್ಲಿ ಪಿಪಿಪಿ ಮಾದರಿಯಲ್ಲಿ ಮೆಟ್ರೋ ರೈಲು ಯೋಜನೆ ಆರಂಭಿಸಿದರೆ ಭೂ ಸ್ವಾಧೀನಕ್ಕೆ ತೆಗೆದುಕೊಳ್ಳುವ ಕಾಲಾವಕಾಶ ಕಡಿಮೆಯಾಗುವುದರಿಂದ ಸಾರ್ವಜನಿಕರಿಗೆ ಕಡಿಮೆ ಅವಧಿಯಲ್ಲಿ ಮೆಟ್ರೋ ಸೌಕರ್ಯ ಕಲ್ಪಿಸಬಹುದಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್.ಮೋಹನ್‍ದಾಸ್ ಹೆಗಡೆ ಅವರು ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಿಕೊಂಡಿದ್ದರು.
ಅವರ ಈ ಮನವಿ ಮೇರೆಗೆ ನೈಸ್ ರಸ್ತೆಯಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಬಿಎಂಆರ್‍ಸಿಎಲ್‍ಗೆ ಪತ್ರ ಬರೆದಿದ್ದಾರೆ.
ನೈಸ್ ರಸ್ತೆಯಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸುವುದರ ಜತೆಗೆ ಎರಡನೆ ಹಂತದಲ್ಲಿ ವೈಟ್‍ಫೀಲ್ಡ್‍ನಿಂದ ತುಮಕೂರು ವರೆಗೆ 65ಕಿಮೀ ಉದ್ದದ ಹೊರವರ್ತುಲ ರಸ್ತೆ ಅನುಷ್ಠಾನಗೊಳಿಸುವ ಕುರಿತಂತೆಯೂ ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳು ಮನವಿ ಮಾಡಿಕೊಂಡಿದ್ದರು.