ಶಹಬಾದ್ : ರಾಜಸ್ತಾನದ ಬುರಾನ್ ಜಿಲ್ಲೆಯ ಕಿಶನ್ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಯಲ್ಲಿ ಮೊಹರು ಮಾಡಿದ ವಿದ್ಯುನ್ಮಾನ ಮತ ಯಂತ್ರ(ಇವಿಎಂ) ಪತ್ತೆಯಾಗಿದೆ.
ಮತಯಂತ್ರ ಪತ್ತೆ ಹಿನ್ನಲೆಯಲ್ಲಿ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನ ಆರೋಪಗಳ ಮೇಲೆ ಇಬ್ಬರು ಅಧಿಕಾರಿಗಳನ್ನು ಚುನಾವಣಾ ಆಯೋಗ ವಜಾಗೊಳಿಸಿದೆ. ಮತದಾನ ಪ್ರಕ್ರಿಯೆ ಮುಗಿದ ಕೂಡಲೇ ನಿಯಮಾನುಸಾರ ಸೂಕ್ತ ಭದ್ರತೆಯೊಂಧಿಗೆ ಇವಿಎಂಗಳನ್ನು ಸ್ಟ್ರಾಂಗ್ ರೂಮ್(ಭದ್ರತಾ ಕೊಠಡಿ)ನಲ್ಲಿ ಇರಿಸಬೇಕಾಗಿತ್ತು.
ಆದರೆ, ಕರ್ತವ್ಯದಲ್ಲಿದ್ದ ಅಬ್ದುಲ್ ರಫೀಕ್ ಮತ್ತು ನವಲ್ ಸಿಂಗ್ ನಿರ್ಲಕ್ಷ್ಯ ತೋರಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.
199 ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇ.72.7ರಷ್ಟು ಮತದಾನವಾಗಿತ್ತು.
ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಗೆ ಮುನ್ನಾ ದಿನ ಹೊಟೇಲ್ವೊಂದರಲ್ಲಿ ಇವಿಎಂಗಳು ಪತ್ತೆಯಾಗಿ, ಮೂವರು ಸಿಬ್ಬಂದಿಯನ್ನು ಸಸ್ಪೆಂಡ್ಗೊಳಿಸಲಾಗಿತ್ತು.
rajasthan elections, evm, found,kishanganj road,two officers suspended