ಬೆಂಗಳೂರು, ಡಿ.8-ಬಜೆಟ್ ಗಾತ್ರ ಹೆಚ್ಚಾದಂತೆ ವ್ಯತ್ಯಾಸವೂ ಹೆಚ್ಚಾಗುತ್ತದೆ. ಅದನ್ನೇ ಭ್ರಷ್ಟಾಚಾರ ಎಂದು ಕರೆದರೆ ಹೇಗೆ? ಬಿಜೆಪಿಯವರು ತಪ್ಪು ಹೇಳಿಕೆ ನೀಡುತ್ತಿದ್ದಾರೆ. ನನ್ನ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಆರ್ಥಿಕ ಸಮತೋಲನ ಕಾಪಾಡಿಕೊಂಡು ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಜಿ ವರದಿ ಸಂಬಂಧ ಬಿಜೆಪಿಯವರು ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಅವರು, 2010-11 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶೇ.32ರಷ್ಟು ಅಂದರೆ 22,172ರಷ್ಟು ಕೋಟಿ ವ್ಯಾತ್ಯಾಸವಾಗಿತ್ತು. 2012-13ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 32,413 ಕೋಟಿ ರೂ. ವ್ಯತ್ಯಾಸವಾಗಿತ್ತು.
2015-16ರಲ್ಲಿ ಶೇ.39ರಷ್ಟು, 2016-17ರಲ್ಲಿ ಶೇ.19, 2017-18ರಲ್ಲಿ ಶೇ.17ರಷ್ಟು ಕಡಿಮೆಯಾಗಿದೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಬಿಜೆಪಿಯ ಅಶೋಕ್ ಅವರೇ ಇರುವಾಗ ಅದನ್ನು ರಾಜಕೀಕರಣಗೊಳಿಸಿದ್ದಾರೆ. ಯಾವ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದರು.
ಪರ್ಸನಲ್ ಲೈಫ್ ಇಲ್ವೇನ್ರೀ:
ಸರ್…. ವಿದೇಶಕ್ಕೆ ಹೋಗುತ್ತಿದ್ದಿರಂತೆ ಎಂಬ ಪತ್ರಕರ್ತರ ಪ್ರಶ್ನೆಗೆ ಸ್ವಲ್ಪ ಖಾರವಾಗಿಯೇ ಉತ್ತರಿಸಿದ ಸಿದ್ದರಾಮಯ್ಯ, ಎಲ್ಲಿಗೂ ಹೋಗಬಾರದೇನ್ರೀ, ನಮಗೇನ್ ಪರ್ಸನಲ್ ಲೈಫ್ ಇಲ್ವೇನ್ರೀ, ನನ್ನ ಸ್ನೇಹಿತನ ಮಗಳ ಮದುವೆಗೆ ಹೋಗ್ತಾ ಇದ್ದೀನಿ ಎಂದು ಹೇಳಿದರು.