ಎರಡನೇ ದಿನ ಟೀಂ ಇಂಡಿಯಾ ಬೌಲರ್ಗಳ ಮೆರೆದಾಟ

ಅಡಿಲೇಡ್: ಟೀಂ ಇಂಡಿಯಾ ಬೌಲರ್ಗಳ ಸಂಘಟಿತ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ.

ಎರಡನೇ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಆ್ಯರಾನ್ ಫಿಂಚ್ (0) ಮತ್ತು ಮಾರ್ಕಸ್ ಹ್ಯಾರಿಸ್ (26) ಉತ್ತಮ ಆರಂಭ ಕೊಡುವಲ್ಲಿ ಎಡವಿದ್ರು. ನಂತರ ಅಮೋಘ ಬೌಲಿಂಗ್ ದಾಳಿ ಮುಂದುವರೆಸಿದ ಆರ್.ಅಶ್ವಿನ್ , ಉಶ್ಮಾನ್ ಖಾವಾಜಾ (28), ಶಾನ್ ಮಾರ್ಷ್ (2) ವಿಕೆಟ್ ಪಡೆದು ಮಿಂಚಿದ್ರು. ಮಧ್ಯಮ ಕ್ರಮಾಂಕದಲ್ಲಿ ಬಂದ ಹ್ಯಾನ್ಸ್ ಕೊಮ್ (34) , ಮತ್ತು ಪ್ಯಾಟ್ ಕಮಿನ್ಸ್ (10) ವೇಗಿ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಟ್ರಾವೆಸ್ ಹೆಡ್ ಅಜೇಯ 61, ಮಿಶೆಲ್ ಸ್ಟಾರ್ಕ್ ಅಜೇಯ 8 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಪರ ಆರ್.ಅಶ್ವಿನ್ 3, ಇಶಾಂತ್ ಶರ್ಮಾ ಮತ್ತು ಬುಮ್ರಾ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ರು. ಇದಕ್ಕೂ ಮುನ್ನ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 250 ರನ್ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆಯಬೇಕಿದ್ದಲ್ಲಿ ಇನ್ನು 59 ರನ್ಗಳ ಕೊರತೆ ಅನುಭವಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ