ಅಮೆರಿಕಾ ವಿರುದ್ಧ ಹರಿಹಾಯ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ಅಮೆರಿಕಾದ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹರಿಹಾಯ್ದಿದ್ದಾರೆ. ಇಸ್ಲಾಮಿಕ್ ದೇಶವನ್ನು ಒಂದು ಬಾಡಿಗೆ ಗನ್‍ನಂತೆ ಕಾಣುವುದನ್ನು ಅಮೆರಿಕಾ ಮುಂದುವರೆಸಿದರೆ ಆ ಸಂಬಂಧಕ್ಕೆ ಮನ್ನಣೆ ನೀಡುವುದಿಲ್ಲ ಎಂದು ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಪ್ರಧಾನಿಯಾದ ಬಳಿಕ ಮೊದಲು ವಿದೇಶಿ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಅವರು, ಇಸ್ಲಾಮಾಬಾದï ಇನ್ನು ಹಣ ಪಡೆದು ಯಾರ ವಿರುದ್ಧವೂ ಯುದ್ಧ ಮಾಡುವುದಿಲ್ಲ. ಈ ನಿರ್ಧಾರ ಪ್ರಾಣಹಾನಿಯ ಕಾರಣದಿಂದ ಮಾತ್ರವಲ್ಲ, ದೇಶದ ಘನತೆಯ ದೃಷ್ಟಿಯಿಂದ ಎಂದು ಹೇಳಿದ್ದಾರೆ.

ಬಾಡಿಗೆ ಗನ್‍ನಂತೆ ನಮ್ಮನ್ನು ಬಳಸಿಕೊಳ್ಳುವ ಸಂಬಂಧ ನಮಗೆ ಬೇಕಿಲ್ಲ. ನಾವು ಮತ್ತೆ ಆ ಮಟ್ಟಕ್ಕೆ ಇಳಿಯುವುದಿಲ್ಲ. ಅಮೆರಿಕಾದೊಂದಿಗೆ ಉತ್ತಮ ಸಂಬಂಧವನ್ನ್ನು ಬಯಸುತ್ತೇವೆ ಎಂದಿದ್ದಾರೆ.

ಪಾಕ್‍ನ ಭಯೋತ್ಪಾದನೆ ಕುರಿತಾಗಿ ಅಮೆರಿಕಾ ಮಾಡಿರುವ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ. ಪಾಕ್‍ಗೆ ಹಣ ನೀಡಿ ಅಮೆರಿಕಾ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂಬುದನ್ನು ಪ್ರಧಾನಿ ಬಹಿರಂಗವಾಗಿ ಹೊರಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ