ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುಸ್ಲೀಂ ಹಾಗೂ ಪಾಕ್ ವಿರೋಧಿಯಾಗಿದೆ: ಇಮ್ರಾನ್ ಖಾನ್ ವಾಗ್ದಾಳಿ

ಇಸ್ಲಾಮಾಬಾದ್: ಭಾರತದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮುಸ್ಲೀಂ ವಿರೋಧಿ. ಹಾಗಾಗಿ ಪಾಕ್ ವಿರೋಧಿ ಧೋರಣೆಯನ್ನು ಹೊಂದಿದೆ ಎಂದು ಪಾಕಿಸ್ಯಾನ ಪ್ರಧಾನಿ ಇಮ್ರಾನ್ ಖಾನ್ ವಾಗ್ದಾಳಿ ನಡೆಸಿದ್ದಾರೆ.

ನಾವು ಅಧಿಕಾರಕ್ಕೆ ಬಂದಾಗಿನಿಂದಲೂಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ದಿದ್ದೇವೆ. ಆದರೆ ಇದಕ್ಕೆ ಭಾರತದಿಂದ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಕಾರಣ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮುಸ್ಲೀಂ ವಿರೋಧಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಮುಂದಿನ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಹೀಗಾಗಿ ಅವರು ನಮ್ಮೊಂದಿಗೆ ಸ್ನೇಹ ಸಂಬಂಧದ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಿದ್ದಾರೆ. ಭಾರತದ ಈ ನಿರ್ಧಾರ ದುರಂಹಕಾರದ್ದು ಎಂದು ಹೇಳುವ ಮೂಲಕ ಇಮ್ರಾನ್ ಖಾನ್ ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಶಾಂತಿಯುತ ಮಾತುಕತೆ ನೀಡಿದ ಆಹ್ವಾನವನ್ನು ಭಾರತ ತಿರಸ್ಕರಿಸುವ ಮೂಲಕ ದರ್ಪದ ಹಾಗೂ ನಕಾರಾತ್ಮಕ ನಿರ್ಧಾರ ತೆಗೆದುಕೊಂಡಿದೆ. ದೊಡ್ಡ ಮಟ್ಟದ ದೂರದೃಷ್ಟಿ, ಕಲ್ಪನೆಗಳಿಲ್ಲದ ಸಣ್ಣ ವ್ಯಕ್ತಿಗಳು ದೊಡ್ಡ ಕಚೇರಿಯಲ್ಲಿ ಇದ್ದಾರೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

India’s ruling party anti-Muslim, anti-Pakistan: Imran Khan

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ