ಧೂಳೆಬ್ಬಿಸುತ್ತಿರುವ ಕೆಜಿಎಫ್ ಚಿತ್ರದ ಮೂಲಕ ಬಾಲಿವುಡ್‍ಗೆ ನಾಗೇಂದ್ರ ಪ್ರಸಾದ್ ಪಾದಾರ್ಪಣೆ!

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಸದ್ಯ ಭಾರತೀಯ ಚಿತ್ರರಂಗದಲ್ಲಿ ಭರ್ಜರಿ ನಿರೀಕ್ಷೆಗಳನ್ನು ಮೂಡಿಸಿದ್ದು ಇದೇ ಚಿತ್ರದ ಮೂಲಕ ಗೀತರಚನೆಕಾರ ವಿ ನಾಗೇಂದ್ರ ಪ್ರಸಾದ್ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.
ಕೆಜಿಎಫ್ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಹಿಂದಿ ಆವೃತ್ತಿಯ ಚಿತ್ರದಲ್ಲಿನ ಹಾಡುಗಳನ್ನು ವಿ ನಾಗೇಂದ್ರ ಪ್ರಸಾದ್ ಬರೆಯುವ ಮೂಲಕ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಮುಂಬೈನಲ್ಲಿ ಯಶ್ ಕಥೆ ಆರಂಭವಾಗುವುದರಿಂದ ಕನ್ನಡ ಆವೃತ್ತಿಗೆ ಹಾಡು ಬರೆಯುವಂತೆ ಹೇಳಿದರು. ಪರಿಸ್ಥಿತಿಯನ್ನು ವಿವರಿಸಿದ್ದರಿಂದ ಹಾಡು ಮೊದಲಿಗೆ ಹಿಂದಿಯಲ್ಲಿ ಶುರುವಾದರೆ ಉತ್ತಮ ಅಂತ ನಾನು ಬರೆಯಲು ಶುರು ಮಾಡಿದೆ. ಹಾಗೇ ಹುಟ್ಟಿಕೊಂಡಿದ್ದು ಸಲಾಂ ರಾಖಿ ಭಾಯ್ ಹಾಡು ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ