ಬೆಂಗಳೂರು,ಡಿ.7-ರಾಜ್ಯದ ಕೃಷಿ ಡಿಪ್ಲೋಮ ವಿದ್ಯಾರ್ಥಿಗಳನ್ನು ಕೃಷಿ ಸಹಾಯಕರನ್ನಾಗಿ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿ ಇದೇ 12ರಂದು ಬೆಳಗಾವಿ ಸುವರ್ಣಸೌಧ ಮುಂಭಾಗ ಬೆಳಗಾವಿ ಚಲೋ ಹೋರಾಟ ನಡೆಸಲಾಗುವುದು ಎಂದು ಕೃಷಿ ವಿದ್ಯಾರ್ಥಿ ಸಂಘದ ಸಂಚಾಲಕ ವಿ.ರಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಕೃಷಿ ಡಿಪ್ಲೋಮ ವಿದ್ಯಾರ್ಥಿಗಳನ್ನು ಕೃಷಿ ಸಹಾಯಕ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ. ಅದೇ ರೀತಿ ನಮ್ಮ ಸರ್ಕಾರವು ಕೊಟ್ಟ ಮಾತಿನಂತೆ ಕೃಷಿ ಡಿಪ್ಲೋಮ ವಿದ್ಯಾರ್ಥಿಗಳನ್ನು ಕೃಷಿ ಸಹಾಯಕರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಕೃಷಿ ಡಿಪ್ಲೋಮ ಪದವಿಯನ್ನು ನಂಬಿ ಗ್ರಾಮೀಣ ಭಾಗದ ರೈತರು ಮತ್ತು ಬಡ ಮಕ್ಕಳು ಹೆಚ್ಚಾಗಿ ಪ್ರವೇಶ ಪಡೆಯುತ್ತಿದ್ದಾರೆ.4800 ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ನಿರುದ್ಯೋಗಿಗಳಾಗಿದ್ದಾರೆ.ಸರ್ಕಾರ ಇಲ್ಲಿಯವರೆಗೂ ಕೃಷಿ ಸಹಾಯಕರ ಹುದ್ದೆಗೆ ನೇಮಕಾತಿ ಮಾಡಲು ವೃಂದ ಮತ್ತು ನೇಮಕಾತಿ ಕಾಯ್ದೆ ನಿಯಮಗಳಲ್ಲಿ ತಿದ್ದುಪಡಿ ಮಾಡಿಲ್ಲ.
ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಹೋರಾಟಗಾರ್ತಿ ಬಿ.ಟಿ.ಲಲಿತ ನಾಯ್ಕ, ಸಾಮಾಜಿಕ ಚಿಂತಕ ಜಿ.ಎನ್.ನಾಗರಾಜ್, ಕರ್ನಾಟಕ ರಾಜ್ಯ ಡಿಪ್ಲೋಮ ಕೃಷಿ ಪದವೀಧರರ ಅಧ್ಯಕ್ಷ ಮಹಾಂತೇಶ್ ಕುಂಟೋಜಿ ಮತ್ತಿತರರು ಇದ್ದರು.