ಮುಂಬೈ: ಆರ್ ಬಿಐ ತನ್ನ ಹಣಕಾಸು ನೀತಿಯ ಪ್ರಕಟಣೆ ಹೊರಡಿಸಿದ್ದು ಮಾರುಕಟ್ಟೆಯ ನಿರೀಕ್ಷಣೆಯಂತೆಯೇ ರೆಪೋ ದರವನ್ನು ಯಥಾ ಸ್ಥಿತಿಯಲ್ಲಿ ಕಾಪಾಡಿಕೊಳ್ಳಲಾಗಿದೆ. ಈ ಹಿಂದಿನ ಪ್ರಕಟಣೆಯಂತೆ ರೆಪೋ ದರ 6.5 ಶೇಕಡ ಆಗಿದ್ದು ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಲ್ಲದೆ ರಿವರ್ಸ್ ರೆಪೋ ದರದವೂ ಸಹ ಶೇ 6.25 ದಷ್ಟಿದೆ.
ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ನಿಗದಿತ ಬ್ಯಾಂಕುಗಳ ನಗದು ಮೀಸಲು ಅನುಪಾತವನ್ನು ನಿವ್ವಳ ಬೇಡಿಕೆ ಹಾಗೂ ಸಮಯಾವಕಾಶ ಆಧರಿಸಿ 4.0 ಶೇಗೆ ನಿಗದಿಪಡಿಸಿದ್ದಾರೆ.
ಎರಡು ಬಾರಿಯ ಸತತ ರೆಪೋ ದರ ಏರಿಕೆಯ ಬಳಿಕ ಕೇಂದ್ರ ಬ್ಯಾಂಕ್ ಈ ಬಾರಿ ಯಾವುದೇ ದರ ಏರಿಕೆ ಮಾಡಿಲ್ಲ. ಈ ಸಾಲಿನಲ್ಲಿ ನಡೆದ ಕಡೆಯ ಸಭೆಯಲ್ಲಿ ವಿತ್ತೀಯ ನೀತಿ ಸಮಿತಿ ಸದಸ್ಯರ ಪೈಕಿ ಐವರು ಸದಸ್ಯರು ರೆಪೋ ದರ ಯಥಾಸ್ಥಿತಿ ಕಾಪಾಡಿಕೊಳ್ಳುವ ಮಟ್ಟಿಗೆ ಮತ ಹಾಕಿದ್ದಾರೆ.