ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು, ಸಚಿವೆ ಜಯಮಾಲ

ಬೆಂಗಳೂರು,ಡಿ.5- ಮಕ್ಕಳ ಮೇಲೆ ಅತಿಯಾದ ಮಾನಸಿಕ ಒತ್ತಡ ಹೇರುವುದನ್ನು ಪೆÇೀಷಕರು ನಿಲ್ಲಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಜಯಮಾಲ ತಿಳಿಸಿದರು.

ಬಾಲಭವನದಲ್ಲಿ ಇಂದು ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲ ಪೆÇೀಷಕರು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಅವರು ವಯಸ್ಸಿಗೆ ತಕ್ಕ ಮಾನಸಿಕ ಪ್ರಬುದ್ಧತೆ ಹೊಂದಲಾಗುತ್ತಿಲ್ಲ ಎಂದರು.

ಮಕ್ಕಳು ಮನಸ್ಸು ಮಾಡಿದರೆ ಇಡೀ ಸಮಾವನ್ನೇ ಬದಲಾಯಿಸುತ್ತಾರೆÉ.ಮಾಜಿ ಪ್ರಧಾನಿ ಜವಹಾರ್‍ಲಾಲ್ ನೆಹರು ಅವರು ಮಕ್ಕಳ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದರು.ಅಂತಹ ಮಹನೀಯರನ್ನು ನಾವು ಮರೆತಿದ್ದೇಯಾದರೆ ಬದುಕನ್ನೇ ಕಳೆದುಕೊಂಡಂತೆ ಆಗುತ್ತದೆ ಎಂದು ಸಚವರು ಹೇಳಿದರು.
ವಯಸ್ಸನ್ನು ಮೀರಿ ಶೌರ್ಯ ಸಾಹಸ ಪ್ರದರ್ಶಿಸುವ ಮಕ್ಕಳನ್ನು ಹೆಮ್ಮೆಯಾಗುತ್ತದೆ. ಜೀವದ ಹಂಗನ್ನು ತೊರೆದು ಸಾಹಸ ಮಾಡಿರುವುದು ಇನ್ನಿತರ ಮಕ್ಕಳಿಗೆ ಸ್ಪೂರ್ತಿಯಾಗಿದೆ ಎಂದರು.

ಧೈರ್ಯ ಸಾಹಸ ಪ್ರದರ್ಶಿಸಿದ ಎಂಟು ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು 10 ಸಾವಿರ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿದೆ.
ಪ್ರಸಕ್ತ ಸಾಲಿನಲ್ಲಿ ನಾಲ್ಕು ಸಂಸ್ಥೆ ಹಾಗೂ ನಾಲ್ಕು ವ್ಯಕ್ತಿಗಳಿಗೆ25 ಸಾವಿರ ನಗದು ಒಳಗೊಂಡ ಮಕ್ಕಳ ಕಲ್ಯಾಣ ಪ್ರಶಸ್ತಿ ನೀಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ