ನವದೆಹಲಿ, ಡಿ.5- ತೆರಿಗೆ ಇಲಾಖೆ ಕಾಂತ್ರಿಕಾರಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಅರ್ಜಿ ಸಲ್ಲಿಸಿದ ಕೇವಲ ನಾಲ್ಕು ಗಂಟೆಯೊಳಗೆ ಪ್ಯಾನ್ ಕಾರ್ಡ್ ವಿತರಿಸುವುದೂ ಸೇರಿದಂತೆ ಕೆಲವು ತ್ವರಿತ ಕ್ರಮಗಳನ್ನು ಅನುಷ್ಠಾನಗೊಳಿಸಲಿದೆ.
ದೆಹಲಿಯಲ್ಲಿ ನಡೆದ ಕೈಗಾರಿಕಾ ಸಮ್ಮೇಳನದಲ್ಲಿ ಈ ವಿಷಯ ತಿಳಿಸಿದ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಅಧ್ಯಕ್ಷ ಸುಶೀಲ್ ಚಂದ್ರ, ಐಟಿ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದೆ. ಇನ್ನೊಂದು ವರ್ಷದಲ್ಲಿ ಕೇವಲ ನಾಲ್ಕೇ ದಿನಗಳಲ್ಲಿ ಗ್ರಾಹಕರಿಗೆ ಪ್ಯಾನ್‍ಕಾರ್ಡ್ ನೀಡುವ ವ್ಯವಸ್ಥೆ ಆರಂಭವಾಗಲಿದೆ ಎಂದು ತಿಳಿಸಿದರು.
ಹಲವು ಕ್ಷೇತ್ರಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆ ಜಾರಿಗೆ ಬರಲಿದೆ. ತೆರಿಗೆಗಳಾ ಪೂರ್ವಪಾವತಿ, ರಿಟನ್ರ್ಸ್ ಸಲ್ಲಿಕೆ, ಮರು ಪಾವತಿ, ಪ್ರಕರಣಗಳ ಆಯ್ಕೆ ಮತ್ತು ದೃಢೀಕರಣಕ್ಕೆ ಪ್ರಕರಣಗಳನ್ನು ಅಂತಿಮಗೊಳಿಸಲು ಹೊಸ ವಿಧಾನಗಳನ್ನು ಅನುಸರಿಸಲಾಗುವುದು ಎಂದು ಅವರು ಹೇಳಿದರು.
ಮೊದಲೇ ಭರ್ತಿ ಮಾಡಿದ ಅರ್ಜಿಗಳನ್ನು ತೆರಿಗೆ ಅಧಿಕಾರಿ ಪರಿಶೀಲನೆ ನಡೆಸುವುದು ಹಾಗೂ ರಿಟನ್ರ್ಸ್‍ಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದು ಸುಧಾರಣಾ ಕ್ರಮಗಳಲ್ಲಿ ಸೇರಿವೆ ಎಂದು ಸುಶೀಲ್ ಚಂದ್ರ ವಿವರಿಸಿದರು.