ಪ್ರತಿ ದಿನ ಪಾಲಿಕೆ ಸದಸ್ಯರಿಗೆ ಇಂದಿರಾ ಕ್ಯಾಂಟೀನ್ ಊಟ

ಬೆಂಗಳೂರು,ಡಿ.5- ಕಾಂಗ್ರೆಸ್‍ನ ಗಂಗಾಂಬಿಕೆ ಮೇಯರ್ ಆದ ಕೂಡಲೇ ಪಾಲಿಕೆಯ ಮಾಸಿಕ ಸಭೆ ವೇಳೆ ನಡೆಯುತ್ತಿದ್ದ ಭರ್ಜರಿ ಊಟಕ್ಕೆ ಬ್ರೇಕ್ ಹಾಕಿ ಎಲ್ಲಾ ಸದಸ್ಯರಿಗೂ ಇಂದಿರಾ ಕ್ಯಾಂಟೀನ್ ಊಟ ಎಂದು ಘೋಷಿಸಿ ಜಾರಿಗೆ ತಂದರು.

ಅಂದಿನಿಂದ ಪ್ರತಿ ಸಭೆ ವೇಳೆ ಇಂದಿರಾ ಕ್ಯಾಂಟೀನ್ ಊಟವೇ ಬರುತ್ತಿದೆ.ಇಂದು ಉಪಮೇಯರ್ ಚುನಾವಣೆ ಸಂದರ್ಭದಲ್ಲೂ ಇಂದಿರಾ ಕ್ಯಾಂಟೀನ್ ಊಟವೇ ಬಂದಿತ್ತು.
ಗೆದ್ದರೂ ಕೂಡ ಕಾಂಗ್ರೆಸ್-ಜೆಡಿಎಸ್‍ನವರು ಇಂದಿರಾ ಕ್ಯಾಂಟೀನ್ ಊಟ ಮಾಡಿದರೆ ಪ್ರತಿ ಪಕ್ಷ ಬಿಜೆಪಿ ಸದಸ್ಯರು ಇಂದಿರಾ ಕ್ಯಾಂಟೀನ್ ಊಟ ಮಾಡದೆ ಸಮೀಪದಲ್ಲಿರುವ ಪೈ ಹೋಟೆಲ್‍ನಿಂದ ಭರ್ಜರಿ ಊಟ ತರಿಸಿಕೊಂಡು ಸವಿದದ್ದು ವಿಶೇಷವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ