ರೈತರು ಮಣ್ಣಿನ ಪರೀಕ್ಷೆ ಮಾಡಿಸಬೇಕು, ಕೃಷಿ ವಿಜ್ಞಾನಿ ಡಾ.ಬಸವರಾಜ್ ಗಿರಿನವರ್

ಬೆಂಗಳೂರು, ಡಿ.5-ಉತ್ಕøಷ್ಟವಾದ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲು ಆರೋಗ್ಯ ಮಣ್ಣಿನ ಅವಶ್ಯಕತೆ ಇದ್ದು, ಎಲ್ಲಾ ರೈತರು ಮಣ್ಣನ್ನು ಪರೀಕ್ಷೆ ಮಾಡಿಸಬೇಕೆಂದು ಕೃಷಿ ವಿಜ್ಞಾನಿ ಡಾ.ಬಸವರಾಜ್ ಗಿರಿನವರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ವಿಶ್ವ ಮಣ್ಣಿನ ದಿನಾಚರಣೆಯಾಗಿದ್ದು, ಮಣ್ಣಿನ ಸರಿಯಾದ ಪೆÇೀಷಣೆ ಬಗ್ಗೆ ರೈತರಿಗೆ ತಿಳಿಸಿಕೊಡುವುದು ಅಗತ್ಯವಿದೆ.ರಾಸಾಯನಿಕ ಮತ್ತು ಮಣ್ಣಿಗೆ ಹಾನಿಕರವಾದ ರಸಗೊಬ್ಬರ, ಕೀಟನಾಶಕಗಳನ್ನು ಬಳಸಿ ಬೆಳೆಗಳನ್ನು ಬೆಳೆಯುವುದರಿಂದ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.ಆದ್ದರಿಂದ ನಾವು ಮಣ್ಣಿನ ಪೆÇೀಷಕಾಂಶ ಕಾಪಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ರೈತರು ರಾಸಾಯನಿಕ ಗೊಬ್ಬರವನ್ನು ಬಿಟ್ಟು, ಹೆಚ್ಚಾಗಿ ಜೈವಿಕ ಗೊಬ್ಬರ ಬಳಸಬೇಕು. ಇದರಿಂದ ಉತ್ತಮ ಆರೋಗ್ಯ ಮತ್ತು ಮಣ್ಣನ್ನು ಸಂರಕ್ಷಿಸಿದಂತಾಗುತ್ತದೆ. ರೈತರು ಮಣ್ಣನ್ನು ತೆಗೆದು ಅದನ್ನು ನಮ್ಮ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರೆ ನಾವು ಆ ಮಣ್ಣಿಗೆ ಸೂಕ್ತವಾದ ಬೆಳೆ ಮತ್ತು ಗೊಬ್ಬರದ ಬಗ್ಗೆ ಮಾಹಿತಿ ನೀಡುತ್ತೇವೆ. ಮಣ್ಣಿನ ಫಲವತ್ತತೆಗೆ ತಕ್ಕಂತೆ ಬೆಳೆ ಬೆಳೆಯುವುದರಿಂದ ಉತ್ತಮ ಫಲ ಸಿಗಲಿದೆ ಎಂದರು.

ಪ್ರತಿ ಜಿಲ್ಲೆಗಳಲ್ಲಿ, ರೈತರ ಸಂಘಟನೆಗಳಲ್ಲಿ , ಕಾಪೆರ್Çೀರೇಟರ್ ಸೊಸೈಟಿಗಳಲ್ಲಿ ನಮ್ಮ ಪ್ರಯೋಗಾಲಯದ ಜಾಹೀರಾತು ನೀಡಿದ್ದು, ಅದರಲ್ಲಿ ನಮ್ಮ ಸ್ವವಿವರ ಮಾಹಿತಿ ಪಡೆಯುವಂತೆ ತಿಳಿಸಿದರು.
ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಡಿ.31ರವರೆಗೂ ಮಣ್ಣಿನ ಪರೀಕ್ಷೆಗೆ 100 ರೂ. ತೆಗೆದುಕೊಳ್ಳಲಾಗುವುದು, ಮಣ್ಣಿನ ಮಾದರಿಗಳನ್ನು ಕ್ರಿಯಾಜೆನ್ ಪ್ರಯೋಗಾಲಯ, ಸಸ್ಯರೋಗಶಾಸ್ತ್ರ ವಿಭಾಗ, ಕೃಷಿ ಕಾಲೇಜು, ಕೃಷಿ ವಿವಿ, ಜಿ.ಕೆ.ವಿ.ಕೆ ಕಳುಹಿಸಿಕೊಡಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ