ನಗರದಲ್ಲಿ ಮಹಾಯೋಗಿ ಅಕ್ಷರ ನಾಥ್ ಅವರಿಂದ ಅಕ್ಷರ್ ಯೋಗ ಚಕ್ರ ಅನಾವರಣ

ಬೆಂಗಳೂರು, ಡಿ.5- ಮೊಟ್ಟ ಮೊದಲ ಬಾರಿಗೆ ನಗರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಗ್ರ್ಯಾಂಡ್ ಮಾಸ್ಟರ್ ಅಕ್ಷರ್ (ಮಹಾಯೋಗಿ ಅಕ್ಷರ್ ನಾಥ್) ನೇತೃತ್ವದಲ್ಲಿ ವಿಶೇಷ ಅಕ್ಷರ್ ಯೋಗ ಚಕ್ರ ಅನಾವರಣಗೊಳಿಸಲಾಯಿತು.

ಅಕ್ಷರ ಯೋಗ ಸಂಸ್ಥೆಯು -ಯೋಗ ಚಕ್ರ ಎಂಬ ಹಗುರವಾದ ಮತ್ತು ಸುಲಭವಾಗಿ ಕೊಂಡೊಯ್ಯುವ ಹೊಸ ಉಪಕರಣವನ್ನು ಪರಿಚಯಿಸಿದೆ.
ಎರಡು ವರ್ಷಗಳ ಕಾಲ ಕಠಿಣವಾದ ಸಂಶೋಧನೆ ಮತ್ತು ವೈದ್ಯಕೀಯ ಹಾಗೂ ಭೌತಚಿಕಿತ್ಸೆಯ ಕ್ಷೇತ್ರದಿಂದ ಹಲವಾರು ತಜ್ಞರ ಸಮಾಲೋಚನೆ ನಡೆಸಿ ಸಿದ್ಧಪಡಿಸಲಾಗಿದೆ.

ಯೋಗ ಚಕ್ರವು ಕುರ್ಚಿಯ ಮೇಲೆ ಕುಳಿತು ಹಲವು ಬೆನ್ನುನೋವಿನ ದೀರ್ಘಾವಧಿಯ ದುಷ್ಪರಿಣಾಮಗಳನ್ನು ಹಿಮ್ಮೆಟ್ಟಿಸುವಂತಹ ಶಕ್ತಿ ಈ ಸಾಧನಕ್ಕಿದೆ.ಇದು ಭುಜಗಳಿಗೆ ಸಹ ಸೂಕ್ತ ವ್ಯಾಯಾಮ ಒದಗಿಸುತ್ತದೆ.

ಗ್ರ್ಯಾಂಡ್ ಮಾಸ್ಟರ್ ಅಕ್ಷರ್ ಹಿಮಾಲಯದಿಂದ ಬಂದವರು.ಅಂತಾರಾಷ್ಟ್ರೀಯ ಮೆಚ್ಚುಗೆ ಪಡೆದ ಯೋಗ ಗುರು ಮತ್ತು ದಾರ್ಶನಿಕರಾಗಿದ್ದಾರೆ.ಪ್ರಪಂಚದಾದ್ಯಂತ ಅಕ್ಷರ ಯೋಗ ಕೇಂದ್ರದಲ್ಲಿ 3000 ಯೋಗ ಶಿಕ್ಷಕರು ಮತ್ತು 5ಲಕ್ಷಕ್ಕಿಂತಲೂ ಹೆಚ್ಚಿನ ಯೋಗಪಟುಗಳು ತರಬೇತಿ ಪಡೆದಿದ್ದಾರೆ.ಬೆಂಗಳೂರಿನಲ್ಲಿ 20 ಯೋಗಕೇಂದ್ರಗಳನ್ನು ಹೊಂದಿದ್ದಾರೆ.

ಮಲ್ಲೇಶ್ವರಂನ ವಿಶ್ವ ವಾಣಿಜ್ಯ ಕೇಂದ್ರದ 30ನೆ ಅಂತಸ್ತಿನಲ್ಲಿ ಈ ವಿಶೇಷ ಯೋಗ ಕಾರ್ಯಾಗಾರ ನಡೆಯಿತು.ಮುಂದಿನ 21ನೆ ಜೂನ್ 2019ರ ಅಂತಾರಾಷ್ಟ್ರೀಯ ಯೋಗ ದಿನದಂದು ಮೌಂಟ್ ಎವರೆಸ್ಟ್‍ನಲ್ಲಿ ಯೋಗ ಶಿಬಿರ ಆಯೋಜಿಸಲಾಗಿದೆ ಎಂದು ಯೋಗ ಗುರು ಮತ್ತುಅಕ್ಷರ ಯೋಗದ ಅಧ್ಯಕ್ಷ ಮತ್ತು ನಿರ್ದೇಶಕ ಗ್ರಾಂಡ್ ಮಾಸ್ಟರ್ ಅಕ್ಷರ್ ಘೋಷಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ