ಬೆಂಗಳೂರು, ಡಿ.3-ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು ಎಂಬ ನಿಯಮವನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು ಎಂದು ವಕೀಲ ಲೋಹಿತ್ಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಸುರಕ್ಷತೆಗೆ ಯಾವಾಗಲೂ ಸಂಚಾರ ನಿಯಮ ಪಾಲಿಸಿ.ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ ಎಂದು ಸಂಚಾರಿ ಪೆÇಲೀಸರು ಕಟ್ಟುನಿಟ್ಟಿನ ಆದೇಶದಡಿ ಕೆಲಸ ನಿರ್ವಹಿಸುತ್ತಾರೆ.ಆದರೆ ಜನಸಾಮಾನ್ಯರು ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡುತ್ತಾರೆ ಎಂದರು.
ಜನಸಾಮಾನ್ಯರು ಮೊಬೈಲ್ ಬಳಸುತ್ತಾ ವಾಹನ ಚಾಲನೆ ಮಾಡಿದರೆ ದಂಡ ವಿಧಿಸುವ ಪೆÇಲೀಸರೂ ಓಲಾ, ಊಬರ್ಗಳವರು ಮೊಬೈಲ್ ಬಳಸಿದರೆ ಅವರಿಗೆ ಯಾವುದೇ ರೀತಿ ದಂಡ ವಿಧಿಸುವುದಿಲ್ಲ. ಇದು ಸರಿಯಾದ ಕ್ರಮವಲ್ಲ. ಹಾಗಾಗಿ ಎಲ್ಲರಿಗೂ ಒಂದೇ ರೀತಿ ನಿಯಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
2018ರ ನವೆಂಬರ್ 31 ರ ವೇಳೆಗೆ 31,542 ಸವಾರರು ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಇದರಲ್ಲಿ ಒಂದು ಕೇಸು ಸಹ ಓಲಾ, ಊಬರ್ ಚಾಲಕರ ಮೇಲೆ ಕೇಸು ದಾಖಲಾಗಿಲ್ಲ. ಇದರ ಬಗ್ಗೆ ನಾನು ಕಳೆದ ನ.22 ರಂದು ಕಾನೂನು ಮತ್ತು ಸಾರಿಗೆ ಸಚಿವರಿಗೆ ಕಾನೂನು ತಿದ್ದುಪಡಿ ಮಾಡುವಂತೆ ಮನವಿ ಪತ್ರ ಸಲ್ಲಿಸಿದ್ದೇನೆ. ಆದರೆ ಅವರಿಂದ ಇದುವರೆಗೂ ಪ್ರತ್ಯುತ್ತರ ಬಂದಿಲ್ಲ ಎಂದರು.
ಇನ್ನೂ ನಾಲ್ಕು ದಿನಗಳವರೆಗೆ ಪ್ರತ್ಯುತ್ತರಕ್ಕಾಗಿ ಕಾದು ಉತ್ತರ ಬಾರದಿದ್ದಲ್ಲಿ ಡಿ.7ರ ನಂತರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.