ಬೆಂಗಳೂರು,ಡಿ.3- ಅಧಿಕಾರ ಬಂದ ನಂತರದ ದಿನಗಳಲ್ಲಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಬೆಳೆ ಸಾಲ ಮನ್ನಾ ಮಾಡಿದ್ದರು. ಆದರೆ, ಸಾಲ ಮನ್ನಾ ಘೋಷಣೆ ಮಾಡಿ, ತಿಂಗಳುಗಳು ಕಳೆದರೂ ರೈತರಿಗೆ ಇನ್ನೂ ಮಾತ್ರ ಬ್ಯಾಂಕುಗಳಿಂದ ಋಣಮುಕ್ತ ಪತ್ರ ಸಿಕ್ಕಿಲ್ಲ. ಇದೀಗ ರೈತರ ಸಾಲ ಮನ್ನಾ ವಿಷಯವಾಗಿ ಒಂದು ಹೆಜ್ಜೆ ಮುಂದೆ ಬಂದಿರುವ ಸರ್ಕಾರ ಯಾವೆಲ್ಲ ರೈತರ ಬೆಳೆ ಸಾಲ ಮನ್ನಾ ಆಗಿದೆ ಎಂಬುದನ್ನು ಅಂತರ್ಜಾಲದಲ್ಲಿ ಪ್ರಕಟಿಸಿದೆ.
ಯಾರೆಲ್ಲ ರೈತರ ಸಾಲ ಮನ್ನಾ ಆಗಿದೆ ಎಂಬುದನ್ನು ಲಿಂಕ್ ಮೂಲಕ ಅನ್ನದಾತರು ತಿಳಿದುಕೊಳ್ಳಬಹುದು.ಮೊದಲು ಈ ಲಿಂಕ್ ಕ್ಲಿಕ್ ಮಾಡಿ, ಅಲ್ಲಿ ನೀಡಿರುವ ಆಯ್ಕೆಗಳಲ್ಲಿ ಜಿಲ್ಲೆಯ ಹೆಸರನ್ನು ನಮೂದಿಸಿ, ಬ್ಯಾಂಕಿನ ಹೆಸರು ಮತ್ತು ಯಾವ ಶಾಖೆ ಎಂಬುದನ್ನು ಆಯ್ಕೆ ಮಾಡಿ.ನಂತರ ಎಕ್ಸ್ಪೆÇೀರ್ಟ್ ಒತ್ತಿ.ಆಗ ಆ ಶಾಖೆಯಲ್ಲಿ ಯಾವೆಲ್ಲ ರೈತರ ಸಾಲ ಮನ್ನಾ ಆಗಿದೆ ಎಂಬುದರ ಪಟ್ಟಿ ಕಾಣಿಸಿಕೊಳ್ಳುತ್ತದೆ.ಅಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿಬಹುದು.