ಅಂತಿಮ ಹಂತದ ಕಸರತ್ತು; ರಾಜಸ್ಥಾನದಲ್ಲಿ ಮೋದಿ, ತೆಲಂಗಾಣದಲ್ಲಿ ರಾಹುಲ್​ ಗಾಂಧಿ ಭರ್ಜರಿ ಪ್ರಚಾರ

ನವದೆಹಲಿ ಲಕಸಭಾ ಚುನಾವಣೆಯ ದಿಕ್ಸೂಚಿಯಾಗಲಿರುವ ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಚುನಾವಣಾ ಕಾವು ಜೋರಾಗಿದೆ. ತೆಲಂಗಾಣದಲ್ಲಿ ಮೊದಲ ಬಾರಿ ಸರ್ಕಾರ ರಚಿಸಬೇಕು ಹಾಗೂ ರಾಜಸ್ಥಾನದಲ್ಲಿ ತಮ್ಮ ವಿಜಯ ಯಾತ್ರೆ ಮುಂದುವರೆಯಲು ಬಿಜೆಪಿ ಹವಣಿಸುತ್ತಿದೆ. ಇತ್ತ ಕಾಂಗ್ರೆಸ್​ ಕೂಡ ಪ್ರತಿಷ್ಟೆಯ ಕಣವಾಗಿ ಎರಡು ಚುನಾವಣೆಯನ್ನು ಪರಿಗಣಿಸಿದ್ದು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದೆ.
ಇನ್ನೇನು ಚುನಾವಣೆಗೆ ಐದು ದಿನ ಬಾಕಿ ಉಳಿದಿದ್ದು ಕ್ಷೇತ್ರಗಳಲ್ಲಿ ಘಟನಾಘಟಿ ರಾಜಕೀಯ ನಾಯಕರು ಕೊನೆ ಕ್ಷಣದಲ್ಲಿ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ.
ಸಚಿನ್​ ಪೈಲಟ್​, ಅಶೋಕ್​ ಗೆಹ್ಲೋಟ್​ ನಾಯಕತ್ವದಲ್ಲಿ ರಾಜಸ್ಥಾನದಲ್ಲಿ ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್​ ವಿರುದ್ಧ ಇಂದು ಪ್ರಧಾನಿ ಮೋದಿ ಪ್ರಚಾರ ನಡೆಸಲಿದ್ದಾರೆ.  ಇದೇ ಸಮಯಕ್ಕೆ ತೆಲಂಗಾಣದಲ್ಲಿ ರಾಹುಲ್​ ಗಾಂದಿ ಕೂಡ ಹೈದ್ರಾಬಾದ್​ನ ಜುಬ್ಲಿ ಹಿಲ್ಸ್​ ಸೇರಿದಂತೆ ಹಲವು ಕಡೆ ಬಹಿರಂಗ ಪ್ರಚಾರ ನಡೆಸಲಿದ್ದಾರೆ.

ಈಗಾಗಲೇ ರಾಜಸ್ಥಾನದಲ್ಲಿ ಟೆಂಪಲ್​ ರನ್​ ನಡೆಸಿದ ಮೋದಿ ಯಾವ ರೀತಿಯ ಹಿಂದು. ಅವರಿಗೆ ಹಿಂದುತ್ವದ ಪರಿಕಲ್ಪನೆಯ ತಿಳಿದಿಲ್ಲ. ಅವರು ಹಿಂದುಸ್ಥಾನ್​ ಅನ್ನು ಸೃಷ್ಟಿಸಲು ಮುಂದಾಗಿದೆ ಅದಕ್ಕೆ ನಮ್ಮ ಒಪ್ಪಿಗೆ ಇಲ್ಲ. ನಮ್ಮ ದೇಶ ಒಂದೇ ಅದಕ್ಕೆಇರುವುದು ಒಂದೇ ಧ್ವಜ ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದರು.

ಇನ್ನು ನಿನ್ನೆ ತೆಲಂಗಾಣದಲ್ಲಿ ಎರಡನೇ ಬಾರಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ತೆಲಂಗಾಣದ ಕುಟುಂಬ ರಾಜಕೀಯ ಹಾಗೂ ಮತ ಬ್ಯಾಂಕ್​ಗಳಿಗಾಗಿ ಪಕ್ಷಗಳು ಅನುಸರಿಸುತ್ತಿರುವ ತಂತ್ರಗಳು ಅಭಿವೃದ್ಧಿಗೆ ಕಂಟಕವಾಗಿದೆ ಎಂದು ಟೀಕಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ