ನವದೆಹಲಿ: ಸ್ಥಳೀಯ ಕರೆನ್ಸಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ನಡೆಸಲು ಭಾರತ ನೀಡಿದ್ದ ಪ್ರಸ್ತಾವನೆಯನ್ನು ಚೀನಾ ತಿರಸ್ಕರಿಸಿದೆ.
ಹೆಚ್ಚುತ್ತಿರುವ ಟ್ರೇಡ್ ಡಿಫಿಸಿಟ್ ನ್ನು ಸರಿದೂಗಿಸಲು ಭಾರತ ಸ್ಥಳೀಯ ಕರೆನ್ಸಿಯಲ್ಲೇ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ನಡೆಸುವ ಪ್ರಸ್ತಾವನೆ ನೀಡಿತ್ತು. “2017-18 ನೇ ಸಾಲಿನಲ್ಲಿ ಚೀನಾಗೆ ಭಾರತದ ರಫ್ತು 13.4 ಬಿಲಿಯನ್ ನಷ್ಟಾಗಿದ್ದರೆ, ಆಮದು ಪ್ರಮಾಣ 76.4 ಬಿಲಿಯನ್ ಡಾಲರ್ ನಷ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ, ಚೀನಾದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಸ್ಥಳೀಯ ಕರೆನ್ಸಿಯಲ್ಲಿ ನಡೆಸಲು ಉದ್ದೇಶಿಸಿತ್ತು. ಆದರೆ ಚೀನಾ ನಮ್ಮ ಪ್ರಸ್ತಾವನೆಗೆ ಒಪ್ಪಿಗೆ ನೀಡಲಿಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೆನ್ಮಿಬಿ-ರೂಪಾಯಿ ವ್ಯಾಪಾರ ವಹಿವಾಟುಗಳನ್ನು ನಡೆಸುವುದರ ಸಾಧ್ಯತೆಗಳ ಬಗ್ಗೆ ಆರ್ ಬಿಐ ಪರಿಶೀಲನೆ ನಡೆಸಲಿದೆ ಎಂದು ಚೀನಾಗೆ ಹೇಳಲಾಗಿತ್ತು.