ನೀರನ್ನು ಮಲಿನಗೊಳಿಸುವದನ್ನು ತಪ್ಪಿಸಲು ಜಲನೀತಿ ಕಾಯ್ದೆಯ ಆಗತ್ಯವಿದೆ

ಬೆಂಗಳೂರು, ಡಿ.1- ಜೀವ ರಕ್ಷಕ ನೀರನ್ನು ಮಲಿನಗೊಳಿಸುವುದನ್ನು ತಪ್ಪಿಸಲು ರಾಜ್ಯದಲ್ಲೂ ರಾಜಸ್ಥಾನ ಮಾದರಿ ಕಟ್ಟುನಿಟ್ಟಿನ ಜಲನೀತಿಯನ್ನು ಕಾಯ್ದೆಯಾಗಿ ಜಾರಿಗೆ ತರುವ ಅಗತ್ಯತೆ ಇದೆ ಎಂದು ತಜ್ಞರು ಇಂದಿಲ್ಲಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಕಲುಷಿತ ನೀರನ್ನು ಸಂಸ್ಕರಿಸಿ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಿಗೆ ಹರಿಸುತ್ತಿರುವುದರಿಂದ ಆಗುವ ಪರಿಣಾಮಗಳ ಬಗ್ಗೆ ಗಾಂಧಿಭವನದಲ್ಲಿಂದು ಯುವಶಕ್ತಿ ಸಂಘಟನೆ ಹಮ್ಮಿಕೊಂಡಿದ್ದ ಪ್ರಖ್ಯಾತ ವಿಜ್ಞಾನಿಗಳೊಂದಿಗಿನ ವಿಚಾರ ಸಂಕಿರಣದಲ್ಲಿ ತಜ್ಞರು ಈ ಅಭಿಪ್ರಾಯಪಟ್ಟರು.

ಖ್ಯಾತ ಪರಿಸರವಾದಿ ಡಾ.ಯಲ್ಲಪ್ಪರೆಡ್ಡಿ ಮಾತನಾಡಿ, ರಾಜಸ್ಥಾನದಲ್ಲಿ ತಜ್ಞರ ತಂಡ ಒಂದು ಜಲನೀತಿ ಕರಡು ಸಿದ್ಧಪಡಿಸಿ ಅಲ್ಲಿಬ ಸರ್ಕಾರಕ್ಕೆ ವರದಿ ನೀಡಿದರು.ಆ ವರದಿಯನ್ನು ಅಲ್ಲಿನ ಸರ್ಕಾರ ಕೇವಲ ಮೂರೇ ತಿಂಗಳಲ್ಲಿ ಕಾಯ್ದೆಯನ್ನಾಗಿ ಪರಿವರ್ತಿಸಿತು.
ಹಾಗಾಗಿ ಅಲ್ಲಿ ಬಹುತೇಕ ನೀರು ಮಲಿನವಾಗುವುದನ್ನು ತಡೆಗಟ್ಟಿದಂತಾಗಿದೆ. ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಕಾಯ್ದೆ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.

ಜಲನೀತಿ ತರುವ ಬಗ್ಗೆ ಕರಡು ಸಿದ್ಧಪಡಿಸಿ ನೀಡುವಂತೆ ಸರ್ಕಾರ ನಮಗೆ ತಿಳಿಸಿದೆ. ನಾವೆಲ್ಲ ತಜ್ಞರು ಸೇರಿ ಕರಡು ಸಿದ್ಧಪಡಿಸಿ ಸರ್ಕಾರಕ್ಕೆ ನೀಡುತ್ತೇವೆ. ಸರ್ಕಾರ ಕಾಯ್ದೆ ತರಲಿ ಬಿಡಲಿ ಕರಡನ್ನು ನಾವು ಸಾರ್ವಜನಿಕರಿಗೆ ತಲುಪಿಸುತ್ತೇವೆ ಎಂದು ತಿಳಿಸಿದರು.
ಪೆÇ್ರ.ರಮೇಶ್ ಮಾತನಾಡಿ, ಸರ್ಕಾರದ್ದಾಗಲಿ ಅಥವಾ ಯಾವುದೇ ಆಸ್ತಿಯಲ್ಲಿ ನೀರಿರಲಿ ಅದನ್ನು ಕಲುಷಿತಗೊಳಿಸುವುದು ಅಪರಾಧ.ಕಲುಷಿತ ನೀರನ್ನು ಸಂಸ್ಕರಿಸಿ ನಿಸರ್ಗಕ್ಕೆ ಬಿಡಬೇಕು. ಹಾಗೆಯೇ ಬಿಟ್ಟ ವ್ಯಕ್ತಿ ಹಾಗೂ ಅದನ್ನು ತಡೆಗಟ್ಟಲು ವಿಫಲವಾಗುವ ಸರ್ಕಾರ ಕೂಡ ಹೊಣೆಗಾರರಾಗಬೇಕಾಗುತ್ತದೆ ಎಂದು ಹೇಳಿದರು.

ಕೆಸಿ ವ್ಯಾಲಿಗೆ ಎಲ್ಲ ಕಡೆಯಿಂದ ಸಂಸ್ಕರಿತ ನೀರು ಬಿಡಲಾಗುತ್ತಿದೆ.ಆದರೆ ಅಲ್ಲಿನ ನೀರಿನಲ್ಲಿ ನೊರೆ ಬರುತ್ತಿದೆ.ಇದು ವಿವಾದವಾಗಿರುವುದರಿಂದ ಹಾಗೂ ನ್ಯಾಯಾಲಯದಲ್ಲಿರುವುದರಿಂದ ಮಾತನಾಡಲು ಯಾರೂ ಮುಂದೆ ಬರುತ್ತಿಲ್ಲ. ಯಾವುದೇ ತ್ಯಾಜ್ಯ ನೀರು ಸಂಸ್ಕರಿಸುವುದು ಎಲ್ಲರ ಆದ್ಯ ಕರ್ತವ್ಯ.ಇದಕ್ಕೆ ಎಲ್ಲರೂ ಮುಂದಾಗಬೇಕೆಂದು ಮನವಿ ಮಾಡಿದರು.
ವಾಟರ್ ಆ್ಯಕ್ಟ್ ಕರಡನ್ನು ಸಿದ್ಧಪಡಿಸಲು ನಮಗೆ ಸರ್ಕಾರ ಮನವಿ ಮಾಡಿದೆ.ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕೊಡುವೆ. ಅದನ್ನು ಜಾರಿಗೆ ತರುವುದೋ, ಇಲ್ಲವೋ ಅದು ಸರ್ಕಾರಕ್ಕೆ ಬಿಟ್ಟದ್ದು.ರಸಾಯನ ಶಾಸ್ತ್ರಜ್ಞರು, ಸಂಶೋಧನಾ ವಿಜ್ಞಾನಿಗಳು, ಭೂ ವಿಜ್ಞಾನಿಗಳು, ಪೆÇ್ರ.ಆಫ್ ಲಾ ಸಂಘದ ಸದಸ್ಯರು ಮತ್ತಿತರರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಕಲುಷಿತ ನೀರನ್ನು ಸಂಸ್ಕರಿಸುವುದು, ಅದರಿಂದಾಗುವ ಆಗು-ಹೋಗುಗಳನ್ನು ತಿಳಿಸಿಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ