ಬೀಯರ್ ಬಾಟಲ್ ಮೇಲಿನ ಗಣೇಶ ಚಿತ್ರ ತೆಗೆದುಹಾಕಿದ ಸ್ಕಾಟಿಶ್ ಸಂಸ್ಥೆ

ಲಂಡನ್: ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಮಣಿದ ಸ್ಕಾಟಿಶ್ ಸಂಸ್ಥೆ, ಬೀಯರ್ ಬಾಟಲ್ ಗಳ ಮೇಲೆ ಮುದ್ರಿಸಿದ್ದ ಗಣೇಶ ಚಿತ್ರವನ್ನು ಹಿಂಪಡೆದಿದೆ.

ಸ್ಕಾಟಿಶ್ ನ ಗಡಿ ಭಾಗದಲ್ಲಿರುವ ಗ್ಯಾಲಾಶಿಯಲ್ಸ್ ನಗರದಲ್ಲಿದ್ದ ಬಿಯರ್ ಸಂಸ್ಥೆ ಇಂಡಿಯಾ ಪಿಲ್ಸ್ ಬಿಯರ್ ಬ್ರಾಂಡ್ ನ್ನು ಗಣೇಶನ ಭಾವಚಿತ್ರದೊಂದಿಗೆ ಮಾರಾಟ ಮಾಡುತ್ತಿತ್ತು. ನಮ್ಮ ಹಾಪ್ಪಿ ಪಿಲ್ಸ್ನರ್ ನೊಂದಿಗೆ ನಿಮ್ಮೊಳಗಿನ ಗಣೇಶನನ್ನು ಕಂಡುಕೊಳ್ಳಿ ಎಲ್ಲಾ ಅಡೆತಡೆಗಳಿಂದಲೂ ಹೊರಬನ್ನಿ ಎಂಬ ಸಂದೇಶವನ್ನು ಪ್ರಕಟಿಸಲಾಗಿತ್ತು.

ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಅಮೆರಿಕದ ಹಿಂದೂಪರ ಸಂಘಟಾನೆಗಳು ಟೆಂಪ್ಸೆಟ್ ಬ್ರಿವರಿಂಗ್ ಕೋ. ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಹಿನಲೆಯಲ್ಲಿ ಚಿತ್ರ ಹಾಗೂ ಸಂದೇಶವನ್ನು ತೆಗೆದುಹಾಕಿ ಸಂಸ್ಥೆ ಕ್ಷಮೆ ಯಾಚಿಸಿದೆ.

Scottish beer brand withdraws Lord Ganesha images after protests

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ