ಬೆಂಗಳೂರು: ನಾನು ನಿನ್ನನ್ನು ಕಡಿಮೆ ಪ್ರೀತಿಸುತ್ತೇನೆ ಎಂದಲ್ಲ. ಆದರೆ, ದೇಶವನ್ನು ಹೆಚ್ಚು ಪ್ರೀತಿಸುತ್ತೇನೆ ಎನ್ನುತ್ತಿದ್ದ ಅನಂತ್ ಕುಮಾರ್ ಅವರು, ತಮಗೆ ಹೇಳಿದಂತೆ ನಡೆದುಕೊಂಡರು ಎಂದು ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ನೆನಪನ್ನು ಬಿಚ್ಚಿಟ್ಟರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಅನಂತ ಕುಮಾರ್ ಅವರ ಛಾಯಾಚಿತ್ರ ಪ್ರದರ್ಶನ ಹಾಗೂ ಶ್ರದ್ಧಾಂಜಲಿ ಸಭೆಯಲ್ಲಿ ನೆನಪುಗಳನ್ನು ಮೆಲುಕು ಹಾಕುತ್ತಾ ಅನಂತ ಕುಮಾರ್ ಬದುಕಿದ್ದಾಗ ಹೇಗೆ ಲವಲವಿಕೆಯಿಂದ ಇದ್ದರೋ, ಅವರ ಕೊನೆಯ ದಿನಗಳು ಯಾರಿಗೂ ಗೊತ್ತಾಗುವುದು ಬೇಡ ಎಂಬ ಅವರ ಆಶಯದಂತೆ ನಾವು ನಡೆದುಕೊಂಡಿದ್ದೇವೆ ಎಂದು ಉಹಾಪೆÇೀಹಗಳಿಗೆ ತೆರೆ ಎಳೆಯುತ್ತಿದ್ದಂತೆ ಸಭೆಯಲ್ಲಿ ಬಹುತೇಕರು ಗದ್ಗದಿತರಾದರು.
ಅನಂತ್ ಕುಮಾರ್ ಅವರ ಬಗ್ಗೆ ಮಾತನಾಡಲು ಸಾಕಷ್ಟು ನೆನಪುಗಳಿವೆ. ನಾವಿಬ್ಬರು ಮದುವೆ ಮಾಡಿಕೊಳ್ಳಬೇಕು ಎಂದು ಧಾರವಾಡದಲ್ಲಿ ಜಗನ್ನಾಥ್ ಜೋಶಿಯವರ ಬಳಿ ಆಶೀರ್ವಾದ ಕೇಳಲು ತೆರಳಿz್ದÉವು. ಆಗ ಜೋಶಿಯವರು ಅನಂತ್ ಅವರನ್ನು ಕುರಿತು, ಈ ಮಾಣಿಕ್ಯ ಎಲ್ಲಿ ಸಿಕ್ಕಿತು ಎಂದಿದ್ದರು. ಈಗ ನನ್ನ ಇಡೀ ಜೀವನದಲ್ಲಿ ಆ ರತ್ನದ ಮೌಲ್ಯ ಅಳೆಯುತ್ತಲೇ ಇದ್ದೀನಿ ಎಂದು ನೆನಪಿಸಿಕೊಂಡರು.
ವಿಧಾನಸಭೆ ಚುನಾವಣೆ ವೇಳೆಗೆ ಅವರಿಗೆ ಸ್ವಲ್ಪ ಕೆಮ್ಮು ಶುರುವಾಗಿತ್ತು. ಚುನಾವಣೆ ನಡೆದ ನಂತರ ದೆಹಲಿಯಲ್ಲಿ ಪರೀಕ್ಷೆ ಮಾಡಿಸಿಕೊಂಡರು. ಆವಾಗಲೇ ಕ್ಯಾನ್ಸರ್ ಗುಮಾನಿಯಾಗಿತ್ತು. ಯಾರಿಗೂ ವಿಷಯ ಹೇಳಿರಲಿಲ. ಅವರಿಗೆ ಕರ್ತವ್ಯ ಮುಖ್ಯವಾಗಿತ್ತು. ಅನಂತ ಅವರು ಸಂಯಮ ಕಳೆದುಕೊಂಡಿದ್ದನ್ನು ನಾನು ನೋಡಿಲ್ಲ.ಅವರ ಇಡೀ ಜೀವನ ತೆರೆದ ಪುಸ್ತಕವಾಗಿತ್ತು. ಅವರು ಸುಳ್ಳು ಹೇಳಿಲ್ಲ, ನಮ್ಮನ್ನೂ ಹೇಳಲು ಬಿಟ್ಟಿಲ್ಲ. ಅವರು ಪ್ರತೀ ವಿಷಯದಲ್ಲೂ ಕಾಳಜಿ ತೆಗೆದುಕೊಂಡಿದ್ದರು. ನಾನು ಕೆಲಸ ಮಾಡುವುದನ್ನು ಮಾತ್ರ ನೋಡಬೇಕು. ಇಲ್ಲದಿದ್ದರೆ ಯಾರು ನೋಡೋದು ಬೇಡ ಅಂದರು. ಆದರೂ ಅವರು ಕರ್ತವ್ಯ ಮರೆಯಲಿಲ್ಲ. ಅಮೆರಿಕಾಗೆ ಚಿಕಿತ್ಸೆಗೆ ಹೋದಾಗಲೂ ನಾನು ನನ್ನ ದೇಶಕ್ಕೆ ಹೋಗಬೇಕು ಅನ್ನುತ್ತಿದ್ದರು. ಆದರೂ ಆ ರತ್ನವನ್ನು ಉಳಿಸಿಕೊಳ್ಳಲು ಆಗಿಲ್ಲ, ಆ ರತ್ನದ ಬೆಳಕಿನ¯್ಲÉ ನಾನು ಬಾಳುತ್ತೇನೆ ಎಂದು ಗದ್ಗದಿತರಾದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ, ನಮಗೆ ಅತ್ಯಂತ ಹತ್ತಿರವಾದವರು ದೂರವಾದಾಗ ಉಂಟಾಗುವ ನೋವು ಸಹಿಸಲು ಅಸಾಧ್ಯ. ಅನಂತ ಕುಮಾರ ವಯಸ್ಸಿನಲ್ಲಿ ಇನ್ನೂ ಚಿಕ್ಕವರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಾರ್ವಜನಿಕ ಜೀವನಕ್ಕೆ ಬಂದವರು. ಆದರೆ ದೈವದ ಇಚ್ಛೆ ಬೇರೆಯೇ ಆಗಿತ್ತು. ಅವರ ಅಕಾಲಿಕ ಮರಣ ಕೇವಲ ಒಬ್ಬ ಸಂಸದ, ಒಬ್ಬ ಸಚಿವನನ್ನು ಮಾತ್ರ ಕಸಿದುಕೊಂಡಿಲ್ಲ. ಒಬ್ಬ ಮಿತ್ರನನ್ನು ನಮ್ಮಿಂದ ಕಸಿದುಕೊಂಡಿದೆ ಎಂದರು.
2004ರಲ್ಲಿ ಅನಂತಕುಮಾರ್ ಹಾಗೂ ಯಡಿಯೂರಪ್ಪ ಅವರ ಮಧ್ಯೆ ವೈಮನಸ್ಸಿದೆ, ಒಬ್ಬರಿಗೊಬ್ಬರು ನೋಡುವುದಿಲ್ಲ ಎಂದು ಪತ್ರಿಕೆಗಳಲ್ಲಿ ವರದಿಗಳು ಬಂದವು. ಆದರೆ ಆ ಸಂದರ್ಭದಲ್ಲಿ ಯಡಿಯೂರಪ್ಪ ಹಾಗೂ ಅನಂತಕುಮಾರ್ ಒಂದಾಗಿಯೇ ಕೆಲಸ ನಿರ್ವಹಿಸುತ್ತಿದ್ದರು. ಒಂದಾಗಿಯೇ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದರು. ಪರಸ್ಪರರು ತಮ್ಮನ್ನು ಅತ್ಯುತ್ತಮ ಸ್ನೇಹಿತರು ಎಂದೇ ಕರೆದುಕೊಳ್ಳುತ್ತಿದ್ದರು. ಅವರನ್ನು ನೋಡಿ ಆಶ್ಚರ್ಯವಾಗುತ್ತಿತ್ತು ಎಂದರು.
ರಾಜ್ಯಪಾಲ ವಿ.ಆರ್.ವಾಲಾ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಸೇರಿದಂತೆ ಬಹುತೇಕಕ ರಾಜ್ಯ ಮಟ್ಟು ರಾಷ್ಟ್ರಮಟ್ಟದ ನಾಯಕರು ಭಾಗವಹಿಸಿದ್ದರು.
ಕೆಂಪೇಗೌಡರನ್ನು ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡು ಹೋಗಿದ್ದು ಅನಂತ ಕುಮಾರ್. ಅಲ್ಲದೆ ದೇಶದ ಸಂಸ್ಕøತಿ ಮುಂದುವರೆಯಲಿ ಎಂದು ಆಯುರ್ವೇದದ ಎರಡನೇ ಕಾಲೇಜು ಬರಲು ಕಾರಣೀಭೂತರಾದರು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಆರ್ಎಸ್ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಇನ್ನು ಅನಂತ ಕುಮಾರ್ ಜೆಪಿ ಚಳವಳಿಯ ಅತ್ಯಂತ ಕಿರಿಯರಾಗಿ ಬಂಧನವಾಗಿದ್ದರೂ, ಹೈಕೋರ್ಟ್ ಬಿಡುಗಡೆ ಮಾಡಿತ್ತು. ನಗೆ, ಸ್ನೇಹ, ಭಾವನೆ, ಕರ್ತವ್ಯ, ಸೇವೆ, ಹೋರಾಟ ಎಲ್ಲದರ ಸಮ್ಮಿಶ್ರಣವೇ ಅನಂತ ಕುಮಾರ. ಅವರದ್ದು ವಿದ್ವಾಂಸರ ವಂಶ. ಸಮಾಜದ ಬಗ್ಗೆ ಕಳಕಳಿ ಇದ್ದ ತಲೆಮಾರು ಎಂದರು.