ಚೆನ್ನೈ: ತಮಿಳು ಚಿತ್ರರಂಗದ ಉದಯೋನ್ಮುಖ ನಟಿ ರಿಯಾಮಿಕಾ(26) ನೇಣಿಗೆ ಶರಣಾಗಿರುವ ಘಟನೆ ಚೆನ್ನೈ ವಲಸರವಕ್ಕಮ್ನಲ್ಲಿರುವ ಅವರ ನಿವಾಸದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಿಯಾಮಿಕಾ ತಮಿಳು ಚಿತ್ರರಂಗದ ಉದಯೋನ್ಮುಖ ನಟಿ. ಈಕೆ ಕುಂಡ್ರತೈಲ್ ಕುಮಾರನುಕು ಕೊಂಡಾಟ್ಟಮ್ ಮತ್ತು ಅಘೋರಿ-ಯಿನ್ ಅಟ್ಟಮ್ ಆರಂಬಂ ಚಿತ್ರಗಳಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು
ರಿಯಾಮಿಕಾ ತನ್ನ ಸಹೋದರ ಪ್ರಕಾಶ್ರೊಂದಿಗೆ ವಲಸರವಕ್ಕಮ್ನ ಶ್ರೀದೇವಿ ಕುಪ್ಪಂ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕಳೆದ ನಾಲ್ಕು ತಿಂಗಳಿನಿಂದ ವಾಸವಿದ್ದರು.
ಇನ್ನು ರಿಯಾಮಿಕಾ ಮಂಗಳವಾರ ರಾತ್ರಿ ತಡವಾಗಿ ಮನೆಗೆ ಬಂದಳು. ನಾನವಳನ್ನು ಕೊನೆಯಬಾರಿಗೆ ನೋಡಿದ್ದು ಅಂದೇ, ಅಂದು ಅವಳು ತುಂಬಾ ದಣಿದಿದ್ದ ಸ್ಥಿತಿಯಲ್ಲಿದ್ದಳು ಎಂದು ಸಹೋದರ ಪ್ರಕಾಶ್ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ರಿಯಾಮಿಕಾ ಅವರು ಸ್ನೇಹಿತ ದಿನೇಶನಿಗೆ ಸಾಕಷ್ಟು ಬಾರಿ ಕರೆ ಮಾಡಿದ್ದಾಳೆ. ಆದರೆ, ಕರೆ ಸ್ವೀಕರಿಸದ ದಿನೇಶ್ ಮರುದಿನ ಬೆಳಗ್ಗೆ ರಿಯಾಮಿಕಾಳಿಗೆ ವಾಪಸ್ ಕರೆ ಮಾಡಿದಾಗ ನಾಟ್ ರೀಚಬಲ್ ಆಗಿದೆ. ತಕ್ಷಣ ಮನೆಗೆ ಹೋಗಿ ಪ್ರಕಾಶ್ ಬಳಿ ಕೇಳಿದ್ದಾನೆ. ಪ್ರಕಾಶ್ ಹಾಗೂ ದಿನೇಶ್ ಆಕೆಯ ಕೋಣೆಯ ಬಳಿ ಹೋದಾಗ ಲಾಕ್ ಆಗಿದ್ದನ್ನು ಕಂಡು ಸಾಕಷ್ಟು ಬಾರಿ ಬಾಗಿಲು ಬಡಿದಿದ್ದಾರೆ. ಆದರೆ, ತೆಗೆಯದಿದ್ದಾಗ ಪ್ರಕಾಶ್ ಕಿಟಕಿಯನ್ನು ಒಡೆದು ನೋಡಲು ರಿಯಾಮಿಕಾ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.
ತಕ್ಷಣ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ.
Popular Actress, Riya Mika, Commits Suicide