
ಸಿಡ್ನಿ: ಟೀಂ ಇಂಡಿಯಾದ ಮರಿ ಸಚಿನ್ ಎಂದೇ ಗುರುತಿಸಿಕೊಂಡಿರುವ ಟೀಂ ಇಂಡಿಯಾದ ಓಪನರ್ ಪೃಥ್ವಿ ಶಾ ಮುಂಬರುವ ಆಸಿಸ್ ವಿರುದ್ಧದ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಗಾಯಗೊಂಡು ಹೊರ ನಡೆದಿದ್ದಾರೆ.
ಶುಕ್ರವಾರ ಕ್ರಿಕೆಟ್ ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ಮೂರನೇ ದಿನ ಮಿಡ್ ವಿಕೆಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಪೃಥ್ವಿ ಗಾಯಗೊಂಡರು. ಇದರ ಪರಿಣಾಮ ಪೆವಿಲಿಯನ್ ತೆರೆಳಿದ ಪೃಥ್ವಿಯನ್ನ ಪರೀಕ್ಷಿಸಿ ತಂಡದ ಫಿಸಿಯೊ ಪ್ಯಾಟ್ರಿಕ್ ಫರ್ಹಾತ್ ಸ್ಕ್ಯಾನಿಂಗ್ ನಡೆಸಲು ಆಸ್ಪತ್ರಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಪೃಥ್ವಿ ತೀವ್ರವಾಗಿ ಗಾಯಗೊಂಡಿರೊದ್ರಿಂದ ಅಡಿಲೇಡ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಹೊರ ನಡೆದಿದ್ದಾರೆ.
ಎರಡನೇ ದಿನದಾಟದ ಪಂದ್ಯದಲ್ಲಿ ಪೃಥ್ವಿ ಶಾ ಅರ್ಧ ಶತಕ ಬಾರಿಸಿ ಮಿಂಚಿದ್ದರು. 69 ಎಸೆತ ಎದುರಿಸಿದ್ದ ಪೃಥ್ವಿ ಶಾ 11 ಬೌಂಡರಿಗಳನ್ನ ಹೊಡೆದು 66 ರನ್ ಗಳಿಸಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ್ದ ಸಾಧನೆ ಮಾಡಿದ್ದರು.