ಬೆಂಗಳೂರು,ನ.30- ನಮ್ಮ ಮೆಟ್ರೋಗೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡುವಂತೆ ಕುವೆಂಪು ನಗರ ಒಕ್ಕಲಿಗರ ಜಾಗೃತಿ ವೇದಿಕೆ ಒತ್ತಾಯಿಸಿದೆ.
ಬೆಂಗಳೂರು ಕಟ್ಟಿ ಬೆಳೆಸಿದಂತಹ ನಾಡ ದೊರೆ ಕೆಂಪೇಗೌಡರ ಹೆಸರನ್ನು ನಮ್ಮ ಮೆಟ್ರೋಗೆ ಇಡುವುದು ಸೂಕ್ತ.ಈಗಾಗಲೇ ಕೆಂಪೇಗೌಡ ಹೆಸರನ್ನು ಮೆಟ್ರೋ ಟೋಕನ್ನಲ್ಲಿ ಅಳವಡಿಸಲಾಗಿದೆ.ಅದೇ ಪ್ರಕಾರವಾಗಿ ಅವರ ಹೆಸರನ್ನು ನಮ್ಮ ಮೆಟ್ರೋಗೆ ನಾಮಕರಣ ಮಾಡುವ ಮೂಲಕ ಅವರ ಹೆಸರನ್ನು ಉಳಿಸುವಂತೆ ವೇದಿಕೆಯ ಕೆ.ಸಿ.ಗಂಗಾಧರ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೆಂಪೇಗೌಡರ ಭವನ ನಿರ್ಮಾಣಕ್ಕೆ ಐದು ಕೆರೆ ಜಾಗವನ್ನು ಹಿಂದಿನ ಸರ್ಕಾರ ಕೊಡುವುದಾಗಿ ಹೇಳಿತ್ತು.ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಶೀಘ್ರದಲ್ಲಿ ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ವೇದಿಕೆಯ ಸಂಸ್ಥಾಪಕ ಕೆ.ಸಿ.ಗಂಗಾಧರ ತಿಳಿಸಿದ್ದಾರೆ.