
ಸಿಡ್ನಿ: ಮೊಹ್ಮದ್ ಶಮಿ ಅವರ ಮಾರಕ ದಾಳಿಯ ಹೊರತಾಗಿಯೂ ಭರ್ಜರಿ ಬ್ಯಾಟಿಂಗ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ ಟೀಂ ಇಂಡಿಯಾಕ್ಕೆ ತಿರುಗೇಟು ಕೊಟ್ಟಿದೆ.
ಸಿಡ್ನಿಯಲ್ಲಿ ನಡೆದ ಮೂರನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಕ್ರಿಕೆಟ್ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‍ಮನ್‍ಗಳದ ಶಾರ್ಟ್ ಮತ್ತು ಬ್ರಿಯಾಂಟ್ ಅವರ ಅರ್ಧ ಶತಕದ ನೆರವಿನಿಂದ ಉತ್ತಮ ಆರಂಭ ಪಡೆಯಿತು.
ನಂತರ ಮಧ್ಯಮ ಕ್ರಮಾಂಕದಲ್ಲಿ ಕಾರ್ಡರ್ (38), ವೈಟ್‍ಮನ್ (35), ಉಪ್ಪಾಳ್ (5), ಮೆರ್ಲೊ (3)ರನ್ ಗಳಿಸಿದ್ರು. ನೀಲ್ಸನ್ (55), ಹಾರ್ಡಿ 67 ಅರ್ಧ ಶತಕ ಬಾರಿಸಿ ಟೀಂ ಇಂಡಿಯಾ ಬೌಲರ್‍ಗಳ ಬೆವರಿಳಿಸಿದ್ರು.