ಇಥಿಯೋಪಿಯಾದ ಐಎಲ್ ಅಂಡ್ ಎಫ್ಎಸ್ ಕಂಪನಿಯಲ್ಲಿ ಆರ್ಥಿಕ ಬಿಕ್ಕಟು ಸೃಷ್ಟಿಸಿ, ಸಂಸ್ಥೆ ಸ್ಥಳೀಯ ಸಿಬ್ಬಂದಿ ಸಹಾಯದಿಂದ ಏಳು ಭಾರತೀಯ ನೌಕರರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ.
ಇಥಿಯೋಪಿಯಾದ ಒರೊಮಿಯಾ ಮತ್ತು ಅಂಹರ, ಬ್ಲೂಬರ್ಕ್ ರಾಜ್ಯದಲ್ಲಿ ಕಳೆದ ನವೆಂಬರ್ನಿಂದ ಸಂಬಳ ನೀಡದೇ ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈಕುರಿತು ವಿದೇಶಾಂಗ ಸಚಿವರು ತನಿಖೆಗೆ ಮುಂದಾಗಿದ್ದಾರೆ.
ಭಾರತ ಹಾಗೂ ಸ್ಪಾನಿಶ್ ಜೊತೆಗೂಡಿ ಕೆಲವು ರಸ್ತೆ ಯೋಜನೆಗಳನ್ನು ನಿರ್ಮಿಸಿದ್ದು, ಇಲ್ಲಿನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು ಈ ಹಿನ್ನಲೆಯಲ್ಲಿ ಈ ರೀತಿ ಗಂಭೀರ ಕ್ರಮಕ್ಕೆ ಅವರು ಮುಂದಾಗಿರುವ ಸಾಧ್ಯತೆ ಇದೆ ಎಂದು ಕಂಪನಿಯ ನೌಕರರೊಬ್ಬರು ಮೇಲ್ನಲ್ಲಿ ತಿಳಿಸಿದ್ದಾರೆ.
ಇಲ್ಲಿನ ಸ್ಥಿತಿ ವಿವರಿಸಿ ಚೈತನ್ಯ ಹರಿ ಎಂಬ ನೌಕರರೊಬ್ಬರು ಭಾರತದ ಅಧಿಕಾರಿಗಳಿಗೆ ಸಹಾಯಕೋರಿ ಟ್ವೀಟ್ ಮಾಡಿದ್ದರು. ಇದರಿಂದಾಗಿ ಈ ವಿಷಯ ಬೆಳಕಿಗೆ ಬಂದಿತು. ಇನ್ನು ಕೆಲವು ಸಿಬ್ಬಂದಿಗಳು ಪ್ರಧಾನಿ ಮೋದಿ, ರಾಷ್ಟ್ರಪತಿ ಭವನ ಹಾಗೂ ಸುಷ್ಮಾಸ್ವರಾಜ್ ಸೇರಿದಂತೆ ಅನೇಕ ಕನಾಯಕರಿಗೆ ರಕ್ಷಣೆ ಕೋರಿದ್ದು, ಅವರಿಗೆ ಇನ್ನು ಪ್ರತಿಕ್ರಿಯೆ ಸಿಕ್ಕಿಲ್ಲ
ಇಲ್ಲಿ ನಮ್ಮ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಭಾರತೀಯರು ಹೊರಗೆ ಹೋಗಿ ಆಹಾರ ಸೇರಿದಂತೆ ಅವಶ್ಯಕ ವಸ್ತುಗಳನ್ನು ತರುವಂತೆ ಇಲ್ಲ. ನಾವು ಇಲ್ಲಿಂದ ಹೊರ ಹೋದರೆ ಸ್ಥಳೀಯರಿಗೆ ಸಂಬಳ ಸಿಗುವುದಿಲ್ಲ ಎಂಬ ಆತಂಕದಲ್ಲಿದ್ದಾರೆ ಎಂದು ಹಿಂದೂ ಬ್ಯುಸಿನೆಸ್ ಲೈನ್ ವರದಿ ಮಾಡಿದೆ.
ಒತ್ತೆಯಾಳುವಾಗಿರುವ ನಾಗರಾಜ್ ಎಂಬ ಮತ್ತೊಬ್ಬ ಸಿಬ್ಬಂದಿ ಆರೋಗ್ಯ ಕೂಡ ಗಂಭೀರವಾಗಿದೆ,
ಘಟನೆ ಬಗ್ಗೆ ವಿವರಿಸಿರುವ ಇಂಡಿಯನ್ ರಾಯಭಾರಿ ಕಚೇರಿ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಈ ಕುರಿತು ಮಾಹಿತಿ ಪಡೆಯುತ್ತಿದ್ದು, ಕಂಪನಿ ಕೂಡ ಈ ಸಮಸ್ಯೆ ಪರಿಹಾರಕ್ಕಾಗಿ ಮುಂದಾಗುವುದಾಗಿ ತಿಳಿಸಿದೆ ಎಂದರು.
ಕಳೆದ ನಾಲ್ಕು ದಿನಗಳಿಂದ ನಾವು 7 ಸಿಬ್ಬಂದಿಗಳನ್ನು ಕಂಪನಿ ಸಂಬಳ ನೀಡದೆ ಒತ್ತೆಯಾಳುವಾಗಿ ಇಟ್ಟುಕೊಂಡಿದೆ ಎಂದು ನ.27ರಂದು ರಘುವಂಶಿ ಎಂಬುವವರು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದರು.