ಬೆಂಗಳೂರು Nov 29: ಇಂದು ಜಂಟಿ ಉದ್ಯಮಗಳ ಸಾಧ್ಯತೆಗಳನ್ನು ಮೌಲ್ಯಮಾಪನ ಮಾಡಲು ಪಿಐಎ ಆಡಿಟೋರಿಯಂನಲ್ಲಿ ಜೆಕ್ ಗಣರಾಜ್ಯದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಮತ್ತು ಕ್ರಾಫ್ಟ್ಸ್ (ಎಎಂಎಸ್ಪಿಸಿಆರ್) ಸಂಸ್ಥೆಯ ನಿಯೋಗವು ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಶನ್ (ಪಿಐಎ) ಸದಸ್ಯರನ್ನು ಭೇಟಿ ಮಾಡಿದರು.
ಎಎಂಎಸ್ಪಿಸಿಆರ್ ಪ್ರತಿನಿಧಿ ಇವಾನಾ ಡೊಮನಿಕೊವಾ ಅವರು ನಿಯೋಗವನ್ನು ಮುನ್ನಡೆಸಿದರು ಮತ್ತು ಜೋಸೆಫ್ ಸುಸೆನ್, ಒಂಡೆಜ್ ಸುಸೇನ್, ಪೀಟರ್ ಇನ್ಮಾನ್, ವ್ಯಾಕ್ಲಾವ್ ಡಿವಿಸ್, ಪಾವೆಲ್ ಸಚಿ, ಪೆಟ್ರ್ ಒವ್ಕಾಸೆಕ್, ಎಸಿಎನ್ ಮೂರ್ತಿ, ಗ್ರೂಪ್ ಕ್ಯಾಪ್ಟನ್ ಆನಂದ್ ನಾರಾಯಣ್ ಮತ್ತು ಇತರರು ಪಾಲ್ಗೊಂಡಿದ್ದರು. ಭಾರತೀಯ ವ್ಯವಹಾರಗಳಿಗೆ, ಝೆಕ್ ಗಣರಾಜ್ಯದ ಪಾಲುದಾರರು ಮತ್ತು ಗ್ರಾಹಕರೊಂದಿಗೆ ವ್ಯಾಪಾರ ಮಾಡಲು ಈ ಸಭೆಯು ಅವಕಾಶ ನೀಡಿತು
ಬೆಂಗಳೂರಿನ ಜೆಕ್ ಉದ್ಯಮ ಇನ್ಕ್ಯುಬೇಶೇನ್ ವ್ಯವಸ್ಥಾಪಕ ಶ್ರೀ ಎ.ಸಿ.ಎನ್ ಮೂರ್ತಿ ಮಾತಾಡಿದ್ದು, www.czechincubator.com ಮತ್ತು www.czechtrade.com ವೆಬ್ಸೈಟ್ಗಳಲ್ಲಿ ತಮ್ಮ ವಿಚಾರಣೆಯನ್ನು ಅಪ್ಲೋಡ್ ಮಾಡಬಹುದು. ವ್ಯವಹಾರದ ಪ್ರತಿಯೊಂದು ಅಗತ್ಯತೆಗಳನ್ನು ಗುರುತಿಸಲು ಮತ್ತು ಝೆಕ್ ರಿಪಬ್ಲಿಕ್ನಲ್ಲಿ ಸಂಭಾವ್ಯ ವ್ಯಾಪಾರಿ ಪಾಲುದಾರರನ್ನು ಈ ವೆಬ್ಸೈಟ್ಗಳ ಮೂಲಕ ಕಂಡುಕೊಳ್ಳಬಹುದು.
ಪುಷ್ಪಕ್ ಇಂಡಸ್ಟ್ರೀಸ್ನ ಪುಷ್ಪಕ್ ಪ್ರಕಾಶ್ ಅವರು ಕರ್ನಾಟಕದ ಝೆಕ್ ರಿಪಬ್ಲಿಕ್ನ ಗೌರವಾನ್ವಿತ ಸಲಹೆಗಾರರಾಗಿ ನಾಮನಿರ್ದೇಶನಗೊಂಡಿದ್ದಾರೆ ಎಂದು ಮೂರ್ತಿ ಅವರು ಉಲ್ಲೇಖಿಸಿದರು.
ಪಿಐಎಯ ಮಲ್ಯದ್ರಿ ರೆಡ್ಡಿ, ಆರಿಫ್, ಶಿವ ಕುಮಾರ್ ಆರ್, ರಾಜಗೋಪಾಲ್ ಮತ್ತಿತರು ಉಪಸ್ಥಿತರಿದ್ದರು.