ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1, 2019 ರಂದು 2019-20ರ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.
“ಮಧ್ಯಂತರ ಬಜೆಟ್ ಸಿದ್ದತೆ ಕಾರ್ಯ ಈಗಾಗಲೇ ಆರಂಭವಾಗಿದ್ದು ವೇಗದಿಂದ ಸಾಗುತ್ತಿದೆ.” ಎಂದು ಹಣಕಾಸು ಸಚಿವಾಲಯ ಹೇಳಿದೆ.
ಬಜೆಟ್ ಭಾಷಣಕ್ಕಾಗಿ ವಿವಿಧ ಕೇಂದ್ರೀಯ ಸಚಿವಾಲಯಗಳಿಂದ ಈಗಾಗಲೇ ವಿಷಯಾಧಾರಿತ ಅಂಶಗಳನ್ನು ಕೋರಲಾಗಿದೆ.ಇದು ಪ್ರಸ್ತುತ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕಡೆಯ ಬಜೆಟ್ ಆಗಿರಲಿದೆ.
ಕಳೆದ ತಿಂಗಳು ಸಚಿವಾಲಯವು ಮುಂದಿನ ಬಜೆಟ್ ಗಾಗಿ ತಯಾರಿಯನ್ನು ಪ್ರಾರಂಭಿಸಿತ್ತು.ಈ ಸಂಬಂಧ ಸಚಿವಾಲಯವು ಉಕ್ಕು, ವಿದ್ಯುತ್, ವಸತಿ ಹಾಗೂ ನಗರಾಭಿವೃದ್ದಿ ಸಚಿವಾಲಯದೊಡನೆ ಸಭೆ ನಡೆಸಿತ್ತು.
ಫೆಬ್ರವರಿ 1, 2019 ರಂದು ಸಂಸತ್ತಿನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಕಾರಣದಿಂದ ಡಿಸೆಂಬರ್ 3 ರಿಂದ ಸಚಿವಾಲಯವು ನಾರ್ತ್ ಬ್ಲಾಕ್ ನಲ್ಲಿರುವ ಹಣಕಾಸು ಸಚಿವಾಲಯದ ದ್ವಾರವು ಮಾದ್ಯಗಳಿಗೆ ಮುಚ್ಚಲ್ಪಡಲಿದೆ.
ಇದು ಜೇಟ್ಲಿಯವರು ಮಂಡಿಸಲಿರುವ ಆರನೇ ಬಜೆಟ್ ಆಗಿದೆ.
ಮೋದಿ ಸರ್ಕಾರವು ಫೆಬ್ರವರಿ ಅಂತ್ಯದಲಿ ಬಜೆಟ್ ಮಂಡಿಸುವ ವಸಾಹತುಷಾಹಿ ಪದ್ದತಿ ಅಂತ್ಯಗೊಳಿಸಿ ಫೆಬ್ರವರಿ ಮೊದಲ ದಿನವೇ ಬಜೆಟ್ ಮಂಡಿಸುಅ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು.