ಅಹಮದ್ನಗರ್: ಮಹಾರಾಷ್ಟ್ರದ ಅಹಮದ್ನಗರದಲ್ಲಿರುವ ಶಿರಡಿ ವಿಮಾನ ನಿಲ್ದಾಣವನ್ನು ಬಾಂಬ್ನಿಂದ ಸ್ಫೋಟಿಸುವ ಬೆದರಿಕೆ ಕರೆಯಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ವಿಮಾನ ನಿಲ್ದಾಣ ಅಧಿಕಾರಿಗಳ ಹೆಸರಿಗೆ ಬಂದಿದ್ದ ಪತ್ರದಲ್ಲಿ ಏರ್ಪೆÇೀರ್ಟ್ ಆವರಣದಲ್ಲಿ ಬಾಂಬ್ ಇಡಲಾಗಿದ್ದು, ಅದು ಸ್ಫೋಟಗೊಳ್ಳಲಿದೆ ಎಂದು ತಿಳಿಸಲಾಗಿತ್ತು.
ನಂತರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಮತ್ತು ಇತರ ಭದ್ರತಾ ದಳಗಳು ತಕ್ಷಣ ವಿಮಾನ ನಿಲ್ದಾಣವನ್ನು ಜಾಲಾಡಿದವು. ಆದರೆ ಯಾವುದೇ ಶಂಕಾಸ್ಪದ ವಸ್ತುಗಳಾಗಲಿ ಅಥವಾ ಸ್ಪೋಟಕಗಳಾಗಲಿ ಪತ್ತೆಯಾಗಲಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ನಂತರ ತಿಳಿಯಿತು.
ಬಾಂಬ್ ಬೆದರಿಕೆ ಪತ್ರ ಬರೆದು ಆತಂಕ ಸೃಷ್ಟಿಸಿದ ದುಷ್ಕರ್ಮಿಗಳನ್ನು ಪತ್ತೆ ಮಾಡುವ ಕಾರ್ಯ ಮುಂದುವರಿದಿದೆ.