ಬೆಂಗಳೂರು, ನ.29-ಉಪಮೇಯರ್ ರಮೀಳಾ ಉಮಾಶಂಕರ್ ನಿಧನದ ಹಿನ್ನೆಲೆಯಲ್ಲಿ ಆ ವಾರ್ಡ್ನಲ್ಲಿ ರಾಜಕೀಯ ಕೆಸರರೆಚಾಟ ತೀವ್ರಗೊಂಡಿದೆ.
ಕಾವೇರಿಪುರ ವಾರ್ಡ್ನ ಕಸ ವಿಲೇವಾರಿ ರಾಜಕೀಯ ಪ್ರಭಾವದಿಂದ ಎರಡು ಕಾರ್ಯಾದೇಶವನ್ನು ನೀಡಿರುವುದು ಇಂದು ಬಿಬಿಎಂಪಿ ಸಭೆಯಲ್ಲಿ ಪ್ರತಿಧ್ವನಿಸಿದೆ.
ರಮೀಳಾ ಉಮಾಶಂಕರ್ ಅವರು ಬದುಕಿದ್ದಾಗ ಅಸಮರ್ಪಕ ಕಸ ವಿಲೇವಾರಿ ಕಾರಣವೊಡ್ಡಿ ನರಸೇಗೌಡ ಅವರು ಪಡೆದಿದ್ದ ಗುತ್ತಿಗೆಯನ್ನು ರದ್ದು ಮಾಡಲಾಗಿತ್ತು. ಕೃಷ್ಣ ಎಂಟರ್ಪ್ರೈಸಸ್ ಅವರಿಗೆ ಈ ಗುತ್ತಿಗೆ ನೀಡಲಾಗಿತ್ತು.ಈಗ ರಾಜಕೀಯ ಒತ್ತಡ ಕಾರಣವಾಗಿ ಮತ್ತೆ ನರಸೇಗೌಡ ಎಂಬುವರಿಗೆ ಗುತ್ತಿಗೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಬಿಬಿಎಂಪಿ ಸಭೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ಜಂಟಿ ಆಯುಕ್ತರ ನಿಯಮ ಉಲ್ಲಂಘನೆ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.