ಬೆಂಗಳೂರು,ನ.28- ನೆಸ್ಟ್ ಅವೇ ಸಂಸ್ಥೆಯು ಶೀಘ್ರದಲ್ಲೇ ಬೆಂಗಳೂರು, ಮೈಸೂರು ಮತ್ತು ಚೆನ್ನೈ ಸೇರಿದಂತೆ ವಿವಿಧೆಡೆ ಕಡಿಮೆ ದರದಲ್ಲಿ ಮನೆ ಬಾಡಿಗೆ ನೀಡಲು ನಿರ್ಧರಿಸಿದೆ ಎಂದು ಸಂಸ್ಥಾಪಕ ಅಮರೇಂದ್ರ ಸಾಹು ತಿಳಿಸಿದ್ದಾರೆ.
ಖಾಸಗಿ ಹೋಟೆಲ್ವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಸ್ಟ್ ಅವೇ ಟೆಕ್ನಾಲಜಿ ಸಂಸ್ಥೆ 2015ರಲ್ಲಿ ಆರಂಭವಾಗಿದ್ದು, ಆನ್ಲೈನ್ನಲ್ಲೇ ಬಾಡಿಗೆ ಮನೆಗಳನ್ನು ಹುಡುಕಲು ಅನುಕೂಲ ಮಾಡಿಕೊಟ್ಟಿದೆ. ಈಗಾಗಲೇ 55 ಸಾವಿರ ಬಾಡಿಗೆದಾರರು ಇದ್ದು 25 ಸಾವಿರ ಮನೆಗಳನ್ನು ಒಳಗೊಂಡಿದೆ ಎಂದು ವಿವರಿಸಿದರು.
ಬಾಡಿಗೆ ಮನೆಗಳಿಗಾಗಿ ಹುಡುಕುವಾಗ ಹಲವು ರೀತಿಯ ತಾರತಮ್ಯ, ತಡೆಗಳು ಬರುತ್ತದೆ. ಆದ್ದರಿಂದ ನಾಗರಿಕರಿಗೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು.
ಮನೆಗೆ ಬಾಡಿಗೆದಾರರು ಆನ್ಲೈನ್ ಮುಖಾಂತರ ಬಾಡಿಗೆ ಮನೆಯನ್ನು ಹುಡುಕಿಕೊಳ್ಳಬಹುದಾಗಿದೆ. ನಾವು ನೀಡಿದ ಮನೆಯನ್ನು ತಮ್ಮ ಮನೆಯಂತೆ ನೋಡಿಕೊಳ್ಳಬೇಕು ಮತ್ತು ಸಮಯಕ್ಕೆ ಸರಿಯಾಗಿ ಬಾಡಿಗೆ ನೀಡಬೇಕು ಹಾಗೂ ಬಾಡಿಗೆದಾರರಿಗೆ ಬೇಕಾದ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಬೆಂಗಳೂರು , ನವದೆಹಲಿ, ಗುರುಗಾಂವ್, ಗಾಜಿಯಾಬಾದ್, ಪುಣೆ ಹೈದರಾಬಾದ್, ಮುಂಬೈ ನಗರಗಳಲ್ಲಿಯೂ ಈ ಯೋಜನೆಯನ್ನು ಆರಂಭಿಸಲು ಯೋಜಿಸುತ್ತರುವುದಾಗಿ ತಿಳಿಸಿದರು.
ಭಾರತದ ಅತ್ಯಂತ ದೊಡ್ಡದಾದ ಆನ್ಲೈನ್ ಮನೆ ಬಾಡಿಗೆ ಸಂಬಂಧಿಸಿದ ಜಾಲತಾಣವಾಗಿದ್ದು, ತಮ್ಮ ಸಂಪೂರ್ಣ ಸೇವೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ Zh್ಟಜಿಠಿಜಿ.Zಜ್ಟZಡಿZ್ಝಃಞo್ಝಜ್ಟಟ್ಠm.್ಚಟಞ ಹಾಗೂ ಮೊ: 9535933426 ಸಂಪರ್ಕಿಸಬಹುದಾಗಿದೆ ಎಂದು ವಿವರಿಸಿದರು.
ಸುನೀಲ್ಕುಮಾರ್, ಅನಿಲ್ಕುಮಾರ್, ಇಸ್ಮಾಯಿಲ್ ಖಾನ್ ಮತ್ತಿತರರು ಇದ್ದರು.