ಭಾರತ ಹಾಕಿ ತಂಡ ಈ ಬಾರಿಯ ವಿಶ್ವಕಪ್ನ ಆತಿತ್ಯ ವಹಿಸುತ್ತಿದೆ. ಇಂದಿನಿಂದ ಭುವನೇಶ್ವರದಲ್ಲಿ ಹಾಕಿ ಆರಂಭವಾಗಲಿದ್ದು ಇಡೀ ವಿಶ್ವ ಹಾಕಿ ಎದುರು ನೋಡುತ್ತಿದೆ.
ಈ ಬಾರಿಯಾದರು ಭಾರತ ಹಾಕಿ ತಂಡ ವಿಶ್ವಕಪ್ ಗೆಲ್ಲುತ್ತಾ ಅನ್ನೋದನ್ನ ಕಾದು ನೋಡಬೇಕಿದೆ. ಕಳೆದ 43 ವರ್ಷಗಳಿಂದ ಭಾರತಹಾಕಿ ತಂಡ ವಿಶ್ವಕಪ್ ಗೆದ್ದಿಲ್ಲ. ಈ ಬಾರಿ ತವರಿನಲ್ಲಿ ನಡೆಯುತ್ತಿರುವುದರಿಂದ ತವರಿನ ಬೆಂಬಲದೊಂದಿಗೆ ಮನ್ಪ್ರೀತ್ ಸಿಂಗ್ ನಾಯಕತ್ವದಲ್ಲಿ ಗೆಲ್ಲುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಭಾರತ ಹಾಕಿ ತಂಡ ಬಲಿಷ್ಠವಾಗಿದ್ದು ವಿಶ್ವ ಹಾಕಿಯಲ್ಲಿ ಅತ್ಯುತ್ತಮ ತಂಡವಾಗಿ ಗುರುತಿಸಿಕೊಂಡಿದೆ. ಕಳೆದ ತಿಂಗಳು ನಡೆದ ಏಷ್ಯಾನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚೆನ್ನಾಗಿ ಆಡಿತ್ತು. ಆದರೆ ಫೈನಲ್ನಲ್ಲಿ ಮಳೆ ಬಂದ ಪಂದ್ಯ ರದ್ದಾದ ಕಾರಣ ಟ್ರೋಫಿಯನ್ನ ಪಾಕಿಸ್ತಾನದೊಂದಿಗೆ ಹಂಚಿಕೊಳ್ಳಬೇಕಾಯಿತು.
ವಿಶ್ವ ರ್ಯಾಂಕಿಂಗ್ನಲ್ಲಿ ಐದನೆ ಸ್ಥಾನದಲ್ಲಿರುವ ಭಾರತ ಹಾಕಿ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ತಲುಪಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಿಂದ ಸೋತಿತ್ತು.
ಇದಾದ ನಂತರ ಏಷ್ಯಾನ್ ಗೇಮ್ಸ್ನಲ್ಲೂ ಅತ್ಯುತ್ತಮ ಪ್ರರ್ದಶನ ನೀಡಿ ಗಮನ ಸೆಳೆದಿತ್ತು. ಲೀಗ್ ಹಂತದಲ್ಲಿ 76 ಗೋಲುಗಳನ್ನ ಬಾರಿಸಿ ದಾಖಲೆ ಬರೆದಿತ್ತು. ಆದರೆ ಸೆಮಿಫೈನಲ್ನಲ್ಲಿ ಅಚ್ಚರಿ ರೀತಿಯಲ್ಲಿ ಮ¯