
ಬೆಂಗಳೂರು, ನ.28- ಚಿತ್ರ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ಅಂತ್ಯಕ್ರಿಯೆ ನೆರವೇರಿದ ಕಂಠೀರವ ಸ್ಟುಡಿಯೋದಲ್ಲಿ ಇಂದು ಕುಟುಂಬದವರು ಅಸ್ಥಿ ಪೂಜೆ ನೆರವೇರಿಸಿ ಪಶ್ಚಿಮ ವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ನಡೆಸಿದರು.
ಪತ್ನಿ ಸುಮಲತಾ, ಮಗ ಅಭಿಷೇಕ್ ಸೇರಿದಂತೆ ಕುಟುಂಬದ ಹಲವರು ಪಾಲ್ಗೊಂಡು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.ಸ್ಥಳದಲ್ಲಿ ಅಂಬರೀಶ್ ಅವರ ಬೃಹತ್ ಫೆÇೀಟೋ ಹಾಕಲಾಗಿತ್ತು.21ಭಾಗದಿಂದ ಅಸ್ಥಿ ಸಂಚಯನ ಮಾಡಿ, 15 ಮಡಿಕೆಗಳಲ್ಲಿ ಹಾಕಿ ಅದನ್ನು ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿತ್ತು.
ಅಸ್ಥಿ ಪೂಜೆ ನಂತರ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಗೆ ತೆರಳಿದ ಕುಟುಂಬಸ್ಥರು ಅಸ್ಥಿ ವಿಸರ್ಜನೆ ಮಾಡಿದರು.
ಇದರೊಂದಿಗೆ ಅಂಬರೀಶ್ ತವರೂರಾದ ದೊಡ್ಡರಸಿನಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಇಂದು ಹಾಲು-ತುಪ್ಪ ನೆರವೇರುತ್ತಿರುವುದರಿಂದ ಒಕ್ಕಲಿಗ ಸಂಪ್ರದಾಯದಂತೆ ಅಂಬರೀಶ್ ನೆಟ್ಟಿದ್ದ ತೆಂಗಿನ ಮರದ ಎಳನೀರು, ಹೊಂಬಾಳೆಯನ್ನು ಪೂಜೆಗಾಗಿ ತಂದಿದ್ದರು.
ಹಲವಾರು ಮಂದಿ ಅಭಿಮಾನಿಗಳು ಈ ಕಾರ್ಯಕ್ಕಾಗಿಯೇ ಊರಿನಿಂದ ಬಂದಿದ್ದು, ಇಂದು ಸ್ಟುಡಿಯೋ ಒಳಗಡೆ ಕೇವಲ ಕುಟುಂಬಸ್ಥರು ಹಾಗೂ ಚಿತ್ರರಂಗದ ಗಣ್ಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು.