ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದು ಓರ್ವ ಯೋದ ಹುತಾತ್ಮನಾಗಿದ್ದಾನೆ ಎಂದು ಭದ್ರತಾ ಮೂಲಗಳು ಹೇಳಿವೆ.
ಇಂದು ಬೆಳಿಗ್ಗೆ ದಕ್ಷಿಣಾ ಕಾಶ್ಮೀರದ ಕುಲ್ಗಾಂ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ಈ ಘಟನೆ ಸಂಭವಿಸಿದೆ. ಕುಲ್ಗಾಂ ಜಿಲ್ಲೆಯ ರೆಡ್‍ವಾನಿ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಹತ್ಯೆಯಾದರು ಮತ್ತು ಓರ್ವ ಯೋಧ ತೀವ್ರವಾಗಿ ಗಾಯಗೊಂಡ ಹಿನ್ನಲೆ ಆಸ್ಪತ್ರೆಗೆ ಸೇರಿಸಲಾಯಿತು, ಅದರೆ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟರು ಎಂದು ಅಧಿಕಾರಿಗಳು ಹೇಳಿದರು.
ಪುಲ್ವಾಮ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿ ವೇಳೆ ಒಬ್ಬ ಉಗ್ರ ಹತ್ಯೆಯಾದನು ಮತ್ತು ಒಬ್ಬರು ಅಧಿಕಾರಿಯು ಸೇರಿದಂತೆ ಇಬ್ಬರೂ ಯೋಧರು ಗಾಯಗೊಂಡರು ಎಂದು ಹೇಳಿದರು.