
ವಿಶ್ವಸಂಸ್ಥೆ/ವಾಷಿಂಗ್ಟನ್/ಟೆಲ್ ಅವಿವ್, ನ.27 (ಪಿಟಿಐ)- ಮುಂಬೈ ಮೇಲೆ ಹತ್ತು ವರ್ಷಗಳ ಹಿಂದೆ ನವೆಂಬರ್ 26ರಂದು ನಡೆದ ಭಯೋತ್ಪಾದಕರ ದಾಳಿಯ ಸಂಚುಕೋರರಿಗೆ ತಕ್ಕ ಶಾಸ್ತಿಯಾಬೇಕು ಎಂದು ಆಗ್ರಹಿಸಿರುವ ವಿಶ್ವದ ಅನೇಕ ರಾಷ್ಟ್ರಗಳು, ಭಾರತಕ್ಕೆ ಬೆಂಬಲ ಸೂಚಿಸಿವೆ.
ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾಗುವ ಯಾವುದೇ ವ್ಯಕ್ತಿಯನ್ನು ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಅವರ ವಕ್ತಾರಣಿ ಸ್ಟಿಫಾನೆ ಗುಟೆರ್ರಸ್ ಆಗ್ರಹಿಸಿದ್ದಾರೆ.
26.11ರ ಭಯೋತ್ಪಾದಕರ ದಾಳಿಯ 10ನೇ ಕರಾಳ ನೆನೆಪಿನ ಸಂದರ್ಭದಲ್ಲಿ ಭಾರತಕ್ಕೆ ನೈತಿಕ ಬೆಂಬಲ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಯದ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಅಮೆರಿಕದ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದ್ದಾರೆ.
ಮುಂಬೈನಲ್ಲಿ 2008ರಂದು ನಡೆದ ಭಯೋತ್ಪಾದಕರ ದಾಳಿ ಸಂಚುಕೋರರರಿಗೆ ತಕ್ತ ಶಾಸ್ತಿ ಮಾಡಲು ಪಾಕಿಸ್ತಾನ ಕ್ರಮ ಕೈಗೊಳ್ಳಬೇಕೆಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಉನ್ನತಾಧಿಕಾರಿ ಮೈಕಲ್ ರೊನೆನ್ ಆಗ್ರಹಿಸಿದ್ದಾರೆ.