ಎಡಿನ್‍ಬರ್ಗ್, ನ.27-ಇದು ಸ್ಕಾಟ್‍ಲೆಂಡ್ ಸುಂದರಿಯ ದುರದೃಷ್ಟವೋ ಅಥವಾ ಸ್ವಯಂಕೃತ ಅಪರಾಧವೋ ಗೊತ್ತಿಲ್ಲ. ಒಟ್ಟಿನಲ್ಲಿ ಈಕೆಯ ಸೌಂದರ್ಯಕ್ಕೆ ಕಳಂಕದ ಕಪ್ಪು ಚುಕ್ಕೆಯೊಂದು ಅಂಟಿಕೊಂಡಿದೆ. ಮಿಸ್ ಸ್ಕಾಟ್ಲೆಂಟ್ ಪ್ರಶಸ್ತಿ ಗಳಿಸಿದ್ದ ನಟಾಲೀ ಪಾವೆಲೆಕ್, ಈಕೆಯ ಕಿರೀಟವನ್ನು ಸಂಘಟಕರು ಕಿತ್ತುಕೊಂಡಿದ್ದಾರೆ.
ಈ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಗೆಲ್ಲುವುದಕ್ಕೂ ಮುನ್ನ ನಟಾಲೀ ಪಾವೆಲೆಕ್, ಪತ್ರಿಕೆಗಳಿಗೆ ಪೋಸ್ ನೀಡಲು ತೆರೆದೆದೆಯನ್ನು (ಟಾಪ್‍ಲೆಸ್) ಧಾರಾಳವಾಗಿ ಪ್ರದರ್ಶಿಸಿದ್ದಾಳೆ ಎಂಬುದು ಚೆಲುವೆಯ ಕಿರೀಟ ಕಳಚಲು ಕಾರಣ.
ಕಳೆದ ಸೆಪ್ಟೆಂಬರ್‍ನಲ್ಲಿ ನಟಾಲೀ(35) ಮಿಸ್ ಸ್ಕಾಟ್ಲೆಂಡ್ ಕಿರೀಟ ತೊಟ್ಟು ಬಿಗಿದ್ದಳು. ಆದರೆ ಈಕೆಯ ಪೂರ್ವಾಪರವನ್ನು ಜಾಲಾಡಿದಾಗ ಈ ರೂಪರಾಶಿ 2005ರಲ್ಲಿ ಕೆಲವು ನಿಯತಕಾಲಿಕೆಗಳಿಗೆ ಎಗ್ಗಿಲ್ಲದೆ ತನ್ನ ಉನ್ನತ ನಗ್ನ ವಕ್ಷೋಜಗಳನ್ನು ಪ್ರದರ್ಶಿಸಿರುವುದು ಕಂಡು ಬಂದಿತು. ಇದೇ ಕಾರಣದ ಮೇಲೆ ಆಕೆಯ ಮಿಸ್ ಸ್ಕಾಟ್ಲೆಂಡ್‍ವನ್ನು ಆಯೋಜಕರು ಹಿಂದಕ್ಕೆ ಪಡೆದಿದ್ದಾರೆ.
ಮೊದಲ ರನ್ನರ್ ಅಪ್ ಆಗಿದ್ದ ಅಲಾನ ಸ್ಟೋಟ್‍ಗೆ ಈಗ ಮಿಸ್ ಸ್ಕಾಟ್ಲೆಂಟ್ ಕಿರೀಟ ತೊಡಿಸಲಾಗಿದೆ. ಅಲಾನ ವಿಶೇಷ ಪಡೆಯ ಮಾಜಿ ಅಧಿಕಾರಿ ಹಾಗೂ ರಾಜಕುಮಾರ್ ಹ್ಯಾರಿಯ ಪರಮಾಪ್ತೆ.
ತನ್ನ ಸೌಂದರ್ಯ ಕಿರೀಟ ಕಳಚಿರುವುದರಿಂದ ಕುಪಿತಗೊಂಡ ನಟಾಲೀ ಸಂಘಟಕರ ವಿರುದ್ಧ ತಾರತಮ್ಯ ಮತ್ತು ಸ್ವಜನ ಪಕ್ಷಪಾತದ ಆರೋಪ ಮಾಡಿದ್ದಾಳೆ.
ರೂಪದರ್ಶಿಯಾಗಿದ್ದ ಈಕೆ 2005ರಲ್ಲಿ ಎಪ್‍ಎಚ್‍ಎಂ, ಝೂ ಮತ್ತು ನಟ್ಸ್ ಸೇರಿದಂತೆ ಅನೇಕ ನಿಯತಕಾಲಿಕಗಳಿಗೆ ತೆರೆದೆದೆಯ ಪೋಸ್ಗಳನ್ನು ನೀಡಿದ್ದಳು. ಅಲ್ಲದೇ ಈಕೆ ಹೈ ಸ್ಟ್ರೀಟ್ ಹನಿ ಎಂಬ ವಯಸ್ಕರರ ಮ್ಯಾಗಜೈನ್‍ನಲ್ಲಿ ಐ ಟಚ್ ಮೈಸೆಲ್ಫ್ ಎಂಬ ಪ್ರಚೋದನಾಕಾರಿ ಟಾಪ್‍ಲೆಸ್ ಪೋಟೊಗಳನ್ನು ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಳು.
ನಟಾಲೀಯಂತೆ ಈ ಹಿಂದೆ ಟಾಪ್‍ಲೆಸ್ ಆಗಿದ್ದ ಅಮೆರಿಕದ ಅನೇಕ ಬೆಡಗಿಯರ ಸೌಂದರ್ಯ ಪ್ರಶಸ್ತಿಗಳಿಗೂ ಕುತ್ತು ಬಂದಿತ್ತು.