ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳ ಗ್ರಹಕ್ಕೆ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ಯಾವುದೇ ಅಡಚಣೆಯಿಲ್ಲದೇ ಭೂಮಿಗೆ ಬಂದಿಳಿದಿದೆ. ಮಂಗಳ ಗ್ರಹದ ಅಧ್ಯಯನಕ್ಕಾಗಿಯೇ ಕಳಿಸಿದ್ದ ರೋವರ್ ಎಂಬ ಉಪಗ್ರಹ ಕಾರ್ಯನಿರ್ವಹಿಸುತ್ತದೋ, ಇಲ್ಲವೋ ಎಂಬ ಶಂಕೆ ವಿಜ್ಞಾನಿಗಳಲ್ಲಿ ಮೂಡಿತ್ತು. ಇದೀಗ ವಿಜ್ಞಾನಿಗಳ ಅನುಮಾನವನ್ನು ನಿವಾರಿಸಿರುವ ರೋವರ್ ಕ್ಷೇಮವಾಗಿ ಭೂಮಿಗೆ ಬಂದಿದ್ದಲ್ಲದೇ, ಸೂರ್ಯನ ಬೆಳಕು ಬಿದ್ದಾಗ ರೋವರ್ನಲ್ಲಿ ಅಳವಡಿಸಿರುವ ಸೌರಫಲಕಗಳ ಮೂಲಕ ಇಂಧನ ದೊರೆತು ಮತ್ತೆ ಕೆಲಸ ಆರಂಭಿಸುತ್ತದೆ ಎಂದು ತಿಳಿದು ಬಂದಿದೆ.
ಭೂಮಿ ಎಂಬ ಗ್ರಹದಲ್ಲಿ ಬೆಂಕಿ, ಆಕಾಶ, ಗಾಳಿ, ನೀರು, ವೈವಿಧ್ಯಮಯ ಜೀವಿಗಳಿಂದ ಕೂಡಿದ ಪ್ರಕೃತಿ ಸೊಬಗು ರಾರಾಜಿಸುತ್ತಿದೆ. ಇಂತಹ ಸೊಬಗು ನಮ್ಮ ಸೌರವ್ಯೂಹದಲ್ಲಿ ಭೂಮಿಯನ್ನು ಬಿಟ್ಟರೆ ಬೇರೆ ಯಾವ ಗ್ರಹಗಳಲ್ಲಿ ಸಿಕ್ಕೀತು? ಇಂತಹ ಭೂಮಿ ಸಕಲ ಜೀವರಾಶಿಗಳಿಗೆ ಬದುಕು ಸಾಗಿಸಲು ಅನುವು ಮಾಡಿಕೊಟ್ಟಿದೆ ಎಂಬುದು ಗೊತ್ತಿರುವ ಸಂಗತಿ. ಆದರೆ ಮಂಗಳ ಗ್ರಹದಲ್ಲಿಯೂ ಜೀವಿಗಳು ವಾಸಿಸಲು ನೆರವಾಗುವಂತಹ ಸೌಲಭ್ಯಗಳು ಅಲ್ಲಲ್ಲಿ ದೊರೆಯುತ್ತಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಂಗಳ ಗ್ರಹವು ಮುಂದೊಂದು ದಿನ ಭೂಮಿಗೆ ಪರ್ಯಾಯ ಆಗಬಹುದೇನೋ ಎಂಬ ನಂಬಿಕೆ ದೃಢವಾಗುತ್ತಿದೆ.
ಈ ನಿಟ್ಟಿನಲ್ಲಿ ಯೋಚಿಸುತ್ತಿರುವ ಮಾನವ ಭೂಮಿಯ ಮೇಲಿರುವಂತೆಯೇ ಅನ್ಯಗ್ರಹಗಳಲ್ಲೂ ಜೀವಿಸುವ ಬಗ್ಗೆ ಆಸಕ್ತಿ ಹೊಂದಿದ್ದಾನೆ. ಇದಕ್ಕಾಗಿಯೇ ದಿನೇದಿನೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳಿಗೆ ಮುಂದಾಗುತ್ತಿದ್ದಾನೆ. ಇದರಲ್ಲಿ ಮಂಗಳಗ್ರಹವೂ ಪ್ರಮುಖವಾದುದು. ಈ ಕಾರಣಕ್ಕಾಗಿಯೇ ಭೂಮಿಯಿಂದ ಗಗನನೌಕೆಗಳನ್ನು ಮಂಗಳ ಗ್ರಹಕ್ಕೆ ಕಳಿಸಿಕೊಡಲಾಗಿದೆ. ಮಂಗಳ ಗ್ರಹದ ಅಧ್ಯಯನ 1976 ರಲ್ಲಿಯೇ ಶುರುವಾಗಿದೆ.
ಈ ಹಿಂದೆಯೂ ರೋವರ್ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದಿತ್ತು. ಕೆಂಪು ಗ್ರಹದ ಮೇಲೆ ಕ್ಲಿಕ್ಕಿಸಲಾಗಿರುವ ಈ ಫೋಟೋಗಳಲ್ಲಿ ಕಂದು ಬಣ್ಣದ ಪ್ರದೇಶಗಳು ಕಾಣಿಸಿದ್ದವು. ಕಳೆದ ಕೆಲವು ರಗಳಿಂದ ಧೂಳಿನ ಚಂಡಮಾರುತ ಮಂಗಳ ಗ್ರಹದಲ್ಲಿ ಕಂಡು ಬಂದಿರುವುದಾಗಿ ಎಂದು ವಿಜ್ಞಾನಿಗಳು ಕೂಡ ತಿಳಿಸಿದ್ದರು. ಅಲ್ಲದೇ ಕೆಂಪು ಗ್ರಹದಲ್ಲಿ ಸ್ವಾತಂತ್ರ ಯಾನದಲ್ಲಿರುವ ಈ ಉಪಗ್ರಹ, ಹೊಸ ಮಾದರಿಯ ಕಲ್ಲನ್ನು ಸಂಗ್ರಹಿಸಿದೆ. ಗ್ರಹದ ಮೇಲ್ಮೈ ಅಧ್ಯಯನದಲ್ಲಿ ಈ ರೋವರ್ ನಿರತವಾಗಿದೆ ಎಂದು ವಿಜ್ಞಾನಿಗಳು ಕೂಡ ಹಲವು ಬಾರಿ ಹೇಳಿದ್ದಾರೆ.
ಇದಕ್ಕೂ ಮೊದಲು ಗ್ರಹದ ಮೇಲ್ಮೈ ಮೇಲಿನ ಕಲ್ಲುಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುವ ಪ್ರಯತ್ನಗಳು ವಿಫಲವಾಗಿತ್ತು. ನಂತರ ರೋವರ್ನಲ್ಲಿ ಹೊಸ ರೀತಿಯ ಡ್ರಿಲ್ನ್ನು ಅಳವಡಿಸಿದ ಮಂಗಳ ಗ್ರಹಕ್ಕೆ ಕಳುಹಿಸಲಾಗಿತ್ತು. ಇದೇ ಸೆಪ್ಟಂಬರ್ನಲ್ಲಿ ಎರಡು ರೀತಿಯ ಬಂಡೆಗಳ ಮಾದರಿಯನ್ನು ಕ್ಯೂರಿಯಾಸಿಟಿ ರೋವರ್ ಸಂಗ್ರಹಿಸಿದೆ. ಹಾಗೆಯೇ ಕೆಂಪು ಗ್ರಹದ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಸಲ್ಫೇಟ್ ಖನಿಜಗಳಿರುವ ಪ್ರದೇಶವನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.