ಕುರುಕ್ಷೇತ್ರ (ಚಂಡೀಗಡ): ಇಂದು ಬೆಳಿಗ್ಗೆ ಕಲ್ಕಾ-ಹೌರಾ ರೈಲಿನ ಒಂದು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದರೆ ಯಾರೊಬ್ಬರಿಗೂ ಗಾಯಗೊಂಡಿಲ್ಲ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ಹೇಳಿದರು.
ಪ್ರಯಾಣಿಕರು ಕುಳಿತುಕೊಳ್ಳುವ ಮತ್ತು ಲಗೇಜ್ ಇಡುವ ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಿತು. ಕುರುಕ್ಷೇತ್ರದ ಹತ್ತಿರವಿರುವ ದೀರ್ಪುರ್ ಮತ್ತು ದೋಹ ಕೇಡಿಯಾ ರೈಲ್ವೆ ನಿಲ್ದಾಣಗಳ ಮಧ್ಯೆ ಈ ಘಟನೆ ಸಂಭವಿಸಿತು ಎಂದು ಅಧಿಕಾರಿಗಳು ಹೇಳಿದರು.
ಇಂಜಿನ್‍ನ ಹಿಂದಿನ ಬೋಗಿಯಲ್ಲಿ ಹೊಗೆ ಕಾಣಿಸಕೊಂಡ ಹಿನ್ನಲೆ, ರೈಲನ್ನು ನಿಲ್ಲಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ಹೇಳಿದರು. ತಕ್ಷಣ ಆಗ್ನಿ ಶಾಮಕ ದಳದವರಿಗೆ ಕರೆ ಮಾಡಲಾಯಿತು. ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೆರಿದಂತೆ ಒಟ್ಟು 6 ಜನರು ತಮಗೆ ಉಸಿರಾಡಲು ತೊಂದರೆಯಾಗುತ್ತಿದೆ ಎಂದು ಹೇಳಿದ ಹಿನ್ನಲೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಹೊಗೆ ಕಾಣಿಸಿಕೊಂಡ ಬೋಗಿಯನ್ನು ಬೇರ್ಪಡಿಸಿ ಸುಮಾರು 50-60 ಮೀಟರ್ ದೂರದಲ್ಲಿ ನಿಲ್ಲಸಲಾಯಿತು, ನಂತರ ಅ ಬೋಗಿ ಸಂಪೂರ್ಣ ಬೆಂಕಿಗೆ ಆಹುತಿಯಯಿತು ಎಂದು ಹೇಳಿದರು. ಘಟನೆಗೆ ಶಾರ್ಟ್ ಸಕ್ರ್ಯೂಟ್ ಕಾರಣ ಎಂದು ಹೇಳಲಾಗಿದೆಯಾದರೂ, ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದರು.