ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸರ್ವಸನ್ನದ್ಧವಾಗಿದೆ: ನೌಕಾಪಡೆ ಮುಖ್ಯಸ್ಥ ಸುನಿಲ್ ಲಂಬಾ

ನವದೆಹಲಿ: 2008ರ ಉಗ್ರರ ದಾಳಿ ಬಳಿಕ ಭಾರತ ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧವಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಸುನಿಲ್ ಲಂಬಾ ಹೇಳಿದ್ದಾರೆ.

26/11ರ ಉಗ್ರರ ದಾಳಿ ನಡೆದ ಬಳಿಕ ಕರಾವಳಿ ಭದ್ರತೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ವಿಶೇಷವಾಗಿ ಮುಂಬೈ ಕರಾವಳಿಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಹದ್ದಿನಕಣ್ಣಿಡಲಾಗಿದೆ. ಕರಾವಳಿಯಲ್ಲಿ ಕಣ್ಗಾಲುಪಡೆಗಳನ್ನು ಹೆಚ್ಚಿಸಲಾಗಿದೆ. ಭೀಕರ ಉಗ್ರರ ದಾಳಿ ನಡೆದ 10 ವರ್ಷಗಳ ಬಳಿಕ ಭಾರತ ಭದ್ರತೆ ವಿಷಯದಲ್ಲಿ ಸಾಕಷ್ಟು ಸರ್ವಸನ್ನದ್ಧಗೊಂಡಿದೆ ಎಂದು ಹೇಳಿದ್ದಾರೆ.

ಇನ್ನು ಭಾರತೀಯ ನೌಕಾಪಡೆ ಸಾಕಷ್ಟು ಬಲಶಾಲಿಯಾಗಿದ್ದು, ಕಡಲ ತೀರದಲ್ಲಿ ದೇಶದ ಹಿತಾಸಕ್ತಿ ಕಾಪಾಡಲು ಎಂತಹುದ್ದೇ ಪರಿಸ್ಥಿತಿ ಎದುರಿಸಲೂ ಸಂಪೂರ್ಣವಾಗಿ ಸಿದ್ಧವಾಗಿದೆ. ಕರಾವಳಿಯಲ್ಲಿ ಬಹುಹಂತದ ಭದ್ರತೆಗಳನ್ನು ಹೆಚ್ಚಿಸಲಾಗಿದೆ. ತೀರ ಪ್ರದೇಶಗಳಲ್ಲಿ ಕರಾವಳಿ ಪಡೆಗಳು ಹಾಗೂ ನೌಕಾಪಡೆಗಳು ಜಂಟಿಯಾಗಿ ಭದ್ರತೆಗಳನ್ನು ನೀಡುತ್ತಿವೆ ಎಂದು ತಿಳಿಸಿದ್ದಾರೆ.

ನ.26 ರಂದು ಪಾಕಿಸ್ತಾನದ 10 ಮಂದಿ ಉಗ್ರರು ಬೋಟ್ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್, ರೈಲ್ವೆನಿಲ್ದಾಣ, ಆಸ್ಪತ್ರೆ. ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿ ನಡೆಸಿ 28 ಮಂದಿ ವಿದೇಶಿಗರು ಸೇರಿದಂತೆ 166 ಜನರ ಸಾವಿಗೆ ಕಾರಣರಾದರು. ದಾಳಿಯಲ್ಲಿ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

India Better Prepared, 10 Years After 26/11 Terror Attack, Navy Chief Admiral Sunil Lanba

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ