ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಜಾಫರ್​ ಷರೀಫ್ ನಿಧನ

ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಜಾಫರ್​ ಷರೀಫ್ ಇಂದು ನಿಧನರಾಗಿದ್ದಾರೆ. ಷರೀಫ್​ ಅವರಿಗೆ 85 ವರ್ಷ ವಯಸ್ಸಾಗಿತ್ತು.

ವಯೋ ಸಹಜ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾಫರ್ ಷರೀಫ್ 2 ದಿನಗಳ ಹಿಂದೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಷರೀಫ್ ಅವರು ಎರಡು ವರ್ಷಗಳಿಂದ ಡಯಾಲಿಸಿಸ್​ನಲ್ಲಿದ್ದರು.

ನಿಜಲಿಂಗಪ್ಪ ಅವಧಿಯಲ್ಲಿ ರಾಜಕೀಯ ಜೀವನ ಪ್ರಾರಂಭಿಸಿದ ಜಾಫರ್​ ಅವರು ಕೇಂದ್ರದ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯಕ್ಕೆ ಹಲವು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದರು. ಬೆಂಗಳೂರಿನ ರೈಲ್ವೆ ಗಾಲಿ, ಅಚ್ಚು ಕಾರ್ಖಾನೆ ಆರಂಭಕ್ಕೆ ಕಾರಣರಾಗಿದ್ದರು. ಜಾಫರ್​ ಅವರು ಇಂದಿರಾ ಗಾಂಧಿಗೆ ತುಂಬಾ ಆಪ್ತರಾಗಿದ್ದರು.

1933ರಂದು ನವೆಂಬರ್ 3ರಂದು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಜಾಫರ್ ಷರೀಫ್ ಅವರು ಜನಿಸಿದ್ದರು. ಷರೀಫ್ ಅವರು ಪಿವಿ ನರಸಿಂಹರಾವ್ ಅವರ ಅಧಿಕಾರವಧಿಯಲ್ಲಿ 1991ರ ಜೂನ್ 21ರಿಂದ 1995ರ ಅಕ್ಟೋಬರ್ 16ರವರೆಗೂ ರೈಲ್ವೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

Congress leader, Jaffer Sharief, Passes Away

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ