ಡಿಸ್ಪೆಪ್ಸಿಯಾ ಅಥವ ಅಗ್ನಿಮಾಂದ್ಯ ಅಂದರೇನು? ತಡೆಯುವುದು ಹೇಗೆ?

ಊಟವಾದ ಕೂಡಲೆ ಕಾಣಿಸಿಕೊಳ್ಳುವ ಮೇಲ್ಹೂಟ್ಟೆನೋವಿಗೆ ಡಿಸ್ಪೆಪ್ಸಿಯಾ ಎಂದು ಹೆಸರು.

ಡಿಸ್ಪೆಪ್ಸಿಯಾದಿದ ಬಳಲುತ್ತಿರುವವರಲ್ಲಿ ಸಾಮಾನ್ಯವಾಗಿ ಕೆಳಕಂಡ ಲಕ್ಷಣಗಳಿರುತ್ತದೆ.

  • ವಾಕರಿಕೆ
  • ಕಫಲಿಪ್ತ ನಾಲಿಗೆ
  • ಹೂಟ್ಟೆ ಉಬ್ಬರಿಸುವುಕೆ
  • ಊಟವಾದ ನಂತರ ಮೇಲ್ಹೂಟ್ಟೆಬಾಗದಲ್ಲಿ ಕಾಣಿಸಿಕೂಳ್ಳುವ ಹೂಟ್ಟೆ ನೋವು.

ಡಿಸ್ಪೆಪ್ಸಿಯಾಗೆ/ಅಗ್ನಿಮಾಂದ್ಯಕ್ಕೆ ಕೆಲವು ಮನೆ ಮದ್ದು

  • 250 ಎಮ್.ಎಲ್ ನೀರಿನಲ್ಲಿ, 1 ಚಮಚ ನಿಂಬೆ ರಸ ಹಾಗು 1 ಚಿಟಕಿ ಉಪ್ಪು ಬೆರಸಿ ಸೇವಿಸುವುದರಿಂದ ವಾಕರಿಕೆ ಹಾಗು ಹೂಟ್ಟೆ ಉಬ್ಬರಿಕೆ ಕಡಿಮೆಯಾಗುತ್ತದೆ.
  • 300 ಎಮ್.ಎಲ್ ನೀರಿಗೆ, 1/2 ಚಮಚ ಸಣ್ಣಗೆ ಕತ್ತರಿಸಿರಿವ ಶುಂಠಿಯನ್ನು ಹಾಕಿ, ನೀರಿನ ಪ್ರಮಾಣ ಸುಮಾರು 150 ಎಮ್. ಎಲ್ ಇಳಿಯುವಷ್ಟು ಕುದಿಸಬೇಕು. ಇದಕ್ಕೆ 1 ಚಿಟಕಿ ಸೈಂಧವ ಲವಣವನ್ನು ಬೆರಸಿ, ಆಹಾರ ಸೇವಿಸಿದ ನಂತರ ಕುಡಿಯುವುದರಿಂದ ಹೂಟ್ಟೆ ನೋವು ಕಡಿಮೆಯಾಗುತ್ತದೆ.
  • 5 ಗ್ರಾಮ್ ಹಿಂಗನ್ನು 15 ಎಮ್.ಎಲ್ ನುಗ್ಗೆಕಾಯಿಯ ಎಲೆಯ ರಸದಲ್ಲಿ ಬೆರಸಿ, ಊಟವಾದ ನಂತರ ಸೇವಿಸಬೇಕು. ಹೀಗೆ ಮಾಡುವುದರಿಂದ ಹೂಟ್ಟೆ ಉಬ್ಬರಿಸುವುದು ಕಡಿಮೆಯಾಗುತ್ತದೆ.
  • 15 ಗ್ರಾಮ್ ಜೀರಿಗೆಯನ್ನು, 350 ಎಮ್.ಎಲ್ ನೀರಿನಲ್ಲಿ 3 ಗಂಟೆಕಾಲ ನೆನೆಸಿಡಬೇಕು. ನಂತರ ಇದನ್ನು ಶೋಧಿಸಿ ಊಟವಾದ ಬಳಿಕ ಸೇವಿಸುವುದರಿಂದ ಹೂಟ್ಟೆನೋವು ಬಾರದ ರೀತಿ ತಡೆಯುತ್ತದೆ. ಜೀರಿಗೆಯು ಹೊಟ್ಟೆಯಲ್ಲಿ ಇರುವ ಏನ್ಜೈಮ್ಸ್ ಅನ್ನು ಹೆಚ್ಚಿಸಲು ಅನುಕೂಲಕಾರಿ.
  • 10 ಎಮ್.ಎಲ್ ಸೇಬಿನ ರಸವನ್ನು ಆಹಾರ ಮುಂಚೆಸೇವಿಸಿದಲ್ಲಿ, ಹೊಟ್ಟೆ ಸಮತೋಲನದಲ್ಲಿರಿಸಲು ಸಹಕಾರಿಯಾಗುತ್ತದೆ.
  • ಲವಂಘವನ್ನು ತುಪ್ಪದಲ್ಲಿ ಹುರಿದಿಟ್ಟುಕೂಂಡು, ಊಟವಾದ ಬಳಿಕ 1 ಲವಂಘದಂತೆ ಸೇವಿಸುತ್ತಾ ಬಂದಲ್ಲಿ ಅಪಾನವಾಯು ಕಡಿಮೆಮಾಡಿಸುತ್ತದೆ.

 

ಡಿಸ್ಪೆಪ್ಸಿಯ ಅಥವ ಅಗ್ನಿಮಾಂದ್ಯ ಬಾರದ ರೀತಿ ತಡೆಗಟ್ಟಲು ಕೆಲವೂಂದು ಮುನ್ನೆಚ್ಚರಿಕೆಯನ್ನು ಕೆಳಗಿನಂತೆ ತೆಗೆದು ಕೊಳ್ಳುವುದು ಉತ್ತಮ

  • ಅತಿ ಹೆಚ್ಚಾಗಿ ತಿನ್ನುವುದು- ಡಿಸ್ಪೆಪ್ಸಿಯಾದಿಂದ ಬಳಲುತ್ತಿರುವ ರೋಗಿಗಳು ತಾವು ಸೇವಿಸುವು ಆಹಾರದ ಪ್ರಮಾಣದ ಬಗ್ಗೆ ಹೆಚ್ಚು ಗಮನ ಕೂಡಬೇಕು.
  • ಈ ಮುಂಚೆ ಸೇವಿಸಿರುವ ಆಹಾರ ಪೂರ್ಣವಾಗಿ ಜೀರ್ಣವಾಗಿರದೆ, ಮೇಲಿಂದ ಮೇಲೆ ಪುನಃ ಆಹಾರ ಸೇವಿಸುತ್ತಾ ಇದಲ್ಲಿ, ಡಿಸ್ಪೆಪ್ಸಿಯಾ ಹೆಚ್ಚಾಗುತ್ತದೆ.
  • ಮೈದಾ ಹಿಟ್ಟಿನಿಂದ ತಯಾರಿಸಿರುವ ಖಾದ್ಯವನ್ನು ಹೆಚ್ಚು ಸೇವಿಸಬಾರದು.
  • ಅತಿಯಾಗಿ ಖಾರವಿರುವ ಆಹಾರ, ಎಣ್ಣೆಯಲ್ಲಿ ಕರೆದ ತಿನುಸುಗಳನ್ನು ಸೇವಿಸಬಾರದು.
  • ಸೂಡ, ಮಧ್ಯಪಾನ ಹಾಗು ಧೂರ್ಮಪಾನವನ್ನು ಸೇವಿಸಬಾರದು.

ಡಿಸ್ಪೆಪ್ಸಿಯಾದಿಂದ ಬಳಲುತ್ತಿರುವವರು ಅನುಸರಿಸಬೇಕಾದ ಕೆಲವೂಂದು ನಿಯಮ ಕೆಳಗಿನಂತಿದೆ

  • ನಿತ್ಯ ವ್ಯಾಯಾಮ, ಯೋಗ ಅಥವ ವಾಯುವಿಹಾರದಲ್ಲಿ ತಮ್ಮನ್ನು ತೊಡಗಿಸಿಕೂಳ್ಳಬೇಕು.
  • ಆಹಾರದಲ್ಲಿ ಫೈಬರ್ ಅಂಶ ಹೆಚ್ಚು ಇರುವ ಪದಾರ್ಥವನ್ನು ಸೇವಿಸಬೇಕು.
  • ಪ್ರತಿ 15 ದಿನಕೂಮ್ಮೇಯಾದರು ಉಪವಾಸ ಮಾಡಬೇಕು.

ಡಿಸ್ಪೆಪ್ಸಿಯಾ ಇರುವವರು ಕೆಳಗೆ ತಿಳಿಸಿರುವ ಯೋಗಾಸನದ ಅಭ್ಯಾಸ ಪ್ರತಿನಿತ್ಯಮಾಡುವುದರಿಂದ, ಅದರ ಲಕ್ಷಣಗಳು ಕ್ರಮೇಣ ಕಡಿಮೆ ಮಾಡಿಸುವುದಲ್ಲಿ ಅನುಕೂಲಕಾರಿಯಾಗಿದೆ.

  • ಭುಜಂಗಾಸನ
  • ಧನುರ್ರಾಸನ
  • ವಜ್ರಾಸನ
  • ಸೇತುಬಂಧಾಸನ

ಡಿಸ್ಪೆಪ್ಸಿಯಾ ಇರುವವರು ಕೆಳಗೆ ತಿಳಿಸಿರು ಪ್ರಾಣಾಯಾಮದ ಅಭ್ಯಾಸ ಪ್ರತಿನಿತ್ಯಮಾಡುವುದರಿಂದ, ಅದರ ಲಕ್ಷಣಗಳು ಕ್ರಮೇಣ ಕಡಿಮೆ ಮಾಡಿಸುವುದಲ್ಲಿ ಅನುಕೂಲಕಾರಿಯಾಗಿದೆ.

ಪ್ರತಿನಿತ್ಯ 3-5 ನಿಮಿಷ ಅಗ್ನಿಸಾರ್ ಕ್ರಿಯೇಯನ್ನು ಅಭ್ಯಾಸಿಸುವುದರಿಂದ ಡಿಸ್ಪೆಪ್ಸಿಯದ ಲಕ್ಷಣ ಕಡಿಮೆಯಾಗುತ್ತದೆ.

ಲೇಖಕರು
ಡಾ. ಸಿಂಧು ಪ್ರಶಾಂತ್
ಬಿ.ಎ.ಎಮ್.ಎಸ್, ಎಮ್.ಡಿ( ಎ.ಎಮ್),ಎಮ್.ಎಸ್ಸಿ(ಯೋಗ)
ದೂರವಾಣಿ-9743857575
ವೆಬ್ಸೈಟ್-www.yogaforpregnant.com

ಆಯುರ್ವೇಧದ ಹಾಗು ಯೋಗದ ಕ್ಷೇತ್ರದಲ್ಲಿ ಕಳೆದ 9 ವರ್ಷಗಳಿಂದ ಸಾಧನೆ ಮಾಡುತ್ತಿರುವ ಡಾ. ಸಿಂಧು ಪ್ರಶಾಂತರವರು ಹೆಸರಾಂತ ಆಯುರ್ವೇಧದ ತಙ್ಞೆ. ಕ್ರಾನಿಕ್ ಡಿಸೀಸ್(ಧೀರ್ಘಕಾಲದ ಕಾಯಿಲೆ), ಪ್ರಿವೆಂಟಿವ್ ಕೇರ್( ರೋಗ ನಿವಾರಣೆ ಹಾಗು ರೋಗಿಯ ಆರೈಕೆ), ಆಯುರ್ವೇಧದ ಪಥ್ಯಾ/ಅಪಥ್ಯಾ, ಒತ್ತಡ ನಿರ್ವಹಣೆ, ಲೈಫ್ ಸ್ಟೈಲ್ ಮ್ಯಾನೆಜ್ಮೆಂಟ್ಗಳ ಬಗ್ಗೆ ವಿಸ್ತಾರವಾದ ಅನುಭವವಿದ್ದು, ಹಲವಾರು ಅಸ್ವಸ್ಥರನ್ನು ಗುಣಮುಖವಾಗಿಸಿದ್ದಾರೆ ಹಾಗು ಗರ್ಭಿಣಿಯರ ಯೋಗದ ಬಗ್ಗೆ ವ್ಯಾಪಕ ಅಧ್ಯಯನ ಮಾಡಿ ಅತಿ ಶೀರ್ಘದಲ್ಲಿಯೇ ಅದರ ಮೇಳೆ ಬರೆದಿರುವ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

 

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ