
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಶೋಪಿಯಾನ್ ಜಿಲ್ಲೆಯಲ್ಲಿ ಮಾಜಿ ವಿಶೇಷ ಪೊಲೀಸ್ ಅಧಿಕಾರಿಯನ್ನು ಅಪಹರಣ ಮಾಡಿರುವ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಬಶರತ್ ಅಹ್ಮದ್ ವಾಗಾಯ್ ಹತ್ಯೆಯಾದ ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಎಂದು ತಿಳಿದುಬಂದಿದೆ.ಅಧಿಕಾರಿಯ ಮೃತ ದೇಹ ಅಪಹರಣಕ್ಕೊಳಗಾದ ಕೆಲ ಗಂಟೆಗಳ ಬಳಿಕ ಪತ್ತೆಯಾಗಿದ್ದು, ಮೃತ ದೇಹದಲ್ಲಿ ಗುಂಡು ಹೊಕ್ಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಯ ಅಪಹರಣದ ಬೆನ್ನಲ್ಲೇ ಮತ್ತೆ ಮೂವರು ವ್ಯಕ್ತಿಗಳನ್ನೂ ಕೂಡ ಉಗ್ರರು ಅಪಹರಣ ಮಾಡಿದ್ದರು. ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಬಿಡುಗಡೆಗೊಂಡ ಯುವಕರನ್ನು ರಿಯಾಜ್ ಅಹ್ಮದ್, ಜಾಹಿದ್ ಅಹ್ಮದ್ ಮತ್ತು ಬಶರತ್ ಅಹ್ಮದ್ ಎಂದು ತಿಳಿದುಬಂದಿದೆ.
Former Special Police Officer, Kidnapped, Killed ,Kashmir’s Shopian