ಹಗಲಿನ ವೇಳೆಯಲ್ಲೇ ಎರಡು ಮನೆಗಳಲ್ಲಿ ಕಳ್ಳತನ

ಬೆಂಗಳೂರು, ನ.24- ಹಗಲು ವೇಳೆಯಲ್ಲಿಯೇ ನಗರದಲ್ಲಿ ಎರಡು ಮನೆಗಳ ಬೀಗ ಒಡೆದು ಒಳನುಗ್ಗಿದ ಚೋರರು ಚಿನ್ನಾಭರಣಗಳನ್ನು ಕದೊಯ್ದಿರುವ ಘಟನೆ ವಿವೇಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈಜಿಪುರ ಬಸ್‍ನಿಲ್ದಾಣ ಸಮೀಪದ ನಿವಾಸಿ ಸ್ವರೂಪ್ ಎಂಬುವರು ಕಾರ್ಯನಿಮಿತ್ತ ನಿನ್ನೆ ಬೆಳಗ್ಗೆ 10 ಗಂಟೆಯಲ್ಲಿ ಹೊರಗೆ ಹೋಗಿದ್ದರು.ಈ ವೇಳೆ ಕಳ್ಳರು ಇವರ ಮನೆಯ ಬೀಗ ಒಡೆದು ಒಳನುಗ್ಗಿ 159 ಗ್ರಾಂ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ.

ಸಂಜೆ 6 ಗಂಟೆಯಲ್ಲಿ ಸ್ವರೂಪ್ ಕುಟುಂಬದವರು ಮನೆಗೆ ವಾಪಸ್ ಆದಾಗಲೇ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳುವಾಗಿರುವ ಚಿನ್ನಾಭರಣದ ಮೌಲ್ಯ 4.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಇದೇ ವ್ಯಾಪ್ತಿಯ ಪೈಪ್‍ಲೈನ್, 21ನೇ ಕ್ರಾಸ್, ಹೋಲಿ ಕ್ರೈಸ್ಟ್ ಶಾಲೆ ಸಮೀಪದ ನಿವಾಸಿ ರೋಸ್‍ಲಿನ್ ಎಂಬುವರು ನಿನ್ನೆ ಮಧ್ಯಾಹ್ನ 12 ಗಂಟೆಯಲ್ಲಿ ಕಾರ್ಯನಿಮಿತ್ತ ಹೊರಗೆ ಹೋಗಿದ್ದರು.

ಈ ವೇಳೆ ಕಳ್ಳರು ಇವರ ಮನೆಯ ಬೀಗ ಒಡೆದು 14 ಗ್ರಾಂ ಚಿನ್ನದ ಆಭರಣವನ್ನು ಕದೊಯ್ದಿದ್ದಾರೆ.ರೋಸ್‍ಲಿನ್ ರಾತ್ರಿ 8 ಗಂಟೆಗೆ ಮನೆಗೆ ವಾಪಸ್ ಆದಾಗಲೇ ಕಳ್ಳತನ ಬೆಳಕಿಗೆ ಬಂದಿದೆ.

ಈ ಎರಡೂ ಪ್ರಕರಣಗಳನ್ನು ವಿವೇಕನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ