ಬೆಂಗಳೂರು,ನ.23- ಜಯನಗರ ಬ್ಲಾಕ್‍ನಲ್ಲಿರುವ ನಾಡಕಚೇರಿಯಲ್ಲಿ ಪ್ರತಿ ಬುಧವಾರ ಉಪತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ.
ವೃದ್ಯಾಪ್ಯರಿಗೆ, ವಿಧವೆಯರಿಗೆ, ಅಂಗವಿಕಲರಿಗೆ, ಅಸಾಹಯಕರು ಹಾಗೂ ಮಂಗಳಮುಖಿಯರಿಗೆ ಸರ್ಕಾರದ ಸವಲತ್ತು ಹಾಗೂ ಆರ್ಥಿಕ ಸಹಾಯವನ್ನು ಉಪಯೋಗಿಸಿಕೊಳ್ಳುವಲ್ಲಿ ತಿಳುವಳಿಕೆ ನೀಡುವುದಾಗಿದೆ ತಹಸೀಲ್ದಾರ್(ಸಹಾಯಕ ನಿರ್ದೇಶಕರು) ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ಪಿಂಚಣಿ ಯೋಜನೆಯಲ್ಲಿ ಯಾರೇ ಮೃತಪಟ್ಟರೂ ಆ ಕುಟುಂಬಕ್ಕೆ 6 ತಿಂಗಳಿಗೆ 20 ಸಾವಿರ ರೂ. ಕೊಡಲಾಗುತ್ತಿದೆ ಮತ್ತು ಅಂತ್ಯ ಸಂಸ್ಕಾರಕ್ಕಾಗಿ 5000 ರೂ. ಕೊಡಲಾಗುತ್ತಿದೆ. ಹೀಗೆ ಇನ್ನೂ ಹಲವಾರು ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಅರ್ಹರಿಗಂತ ಅನರ್ಹರು ಇದರ ಹೆಚ್ಚು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದು ನಿಲ್ಲಬೇಕು. ಪ್ರಾಮಾಣಿಕವಾಗಿ ಇದು ಅರ್ಹರಿಗೆ ತಲುಪವಂತಾಗಬೇಕು ಎಂದು ಹೇಳಿದರು.
ಉಪತಹಸೀಲ್ದಾರ್ ಚಂದ್ರಶೇಖರ್ ಮಾತನಾಡಿ, ಅರ್ಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಸಂಪರ್ಕಿಸದೆ ಹಣ ಕಳೆದುಕೊಳ್ಳದೆ ನೇರವಾಗಿ ಕಚೇರಿಗೆ ಬಂದು ನಮ್ಮನ್ನು ಸಂಪರ್ಕಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ರಾಜಸ್ವ ನಿರೀಕ್ಷಕರಾದ ಪುಟ್ಟಹನುಮಯ್ಯ ರಾಜಸ್ವ ನಿರೀಕ್ಷಕರಾದ ನಂದೀಶ್ ಮತ್ತಿತರರು ಭಾಗವಹಿಸಿದ್ದರು.