ವಂಚಕರ ವಿರುದ್ಧ ಬ್ಯಾಂಕ್‍ಗಳ ಸಿಇಒಗಳೇ ಲುಕ್‍ಔಟ್ ನೋಟಿಸ್ ಹೊರಡಿಸಬಹುದು

ನವದೆಹಲಿ,ನ.23-ಉದ್ದೇಶಪೂರ್ವಕ ಸುಸ್ತಿದಾರರು ಹಾಗೂ ಮೋಸಗಾರರ ವಿರುದ್ಧ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಿಇಒಗಳೇ ಲುಕ್‍ಔಟ್ ನೋಟಿಸ್ ಹೊರಡಿಸಬಹುದಾಗಿದ್ದು, ಕೇಂದ್ರ ಸರಕಾರ ಈ ಸಂಬಂಧ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಅಧಿಕಾರ ನೀಡಿದೆ.

ಇತ್ತೀಚೆಗೆ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಯಂತಹವರು ಉದ್ದೇಶಪೂರ್ವಕ ಸುಸ್ತಿದಾರರಾಗಿದ್ದೂ ವಿದೇಶಕ್ಕೆ ತೆರಳಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬ್ಯಾಂಕಿಂಗ್ ವಲಯ ಸುಧಾರಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಅಂತರ ಸಚಿವಾಲಯದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಲುಕ್ ಔಟ್ ನೋಟಿಸ್ ಹೊರಡಿಸಲು ಬ್ಯಾಕ್‍ಗಳಿಗೆ ಅವಕಾಶ ನೀಡಿದೆ.

CEOs of banks, can now request look-out notices, defaulters

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ