ಬೆಂಗಳೂರು, ನ.23-ಕುವೆಂಪು ಸಭಾಂಗಣದಲ್ಲಿ ನಾಳೆ ಸಂಜೆ 4 ಗಂಟೆಗೆ ಟಿ.ಪಿ.ಕೈಲಾಸಂ ಮತ್ತು ಡಾ.ರಾಶಿ ನೆನಪು-ಹಾಸ್ಯ ಸಂಭ್ರಮ, ವಿವಿಧ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅನಿಕೇತನ ಕನ್ನಡದಳ ಮತ್ತು ಪರಸ್ಪರ ಸ್ನೇಹ ಬಳಗ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದೇ ವೇಳೆ ಗೀತಗಾಯನ, ಕವಿಗೋಷ್ಠಿ, ಕನ್ನಡ ಸೇವಾ ರತ್ನ, ಕನ್ನಡ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ, ಹಾಸ್ಯ ಲೇಖಕ ಎಂ.ತಿಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅಂಕಣ ಬರಹಗಾರ ಎನ್.ರಾಮನಾಥ್, ಕಾಮಿಡಿ ಕಿಲಾಡಿಗಳು ಕಲಾವಿದ ನಗೆಕಡಲು ತಂಡದ ನಾವಿಕ ಗಿರೀಶ್ ಜೈಪ್ರಕಾಶ್ ಆರಾಧ್ಯ, ಸಂಪಾದಕ ಎಚ್.ಎಸ್.ರಾಮಣ್ಣ, ಮಕ್ಕಳ ಸಾಹಿತಿ ಟಿ.ಎಸ್.ನಾಗರಾಜ್‍ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪರಸ್ಪರ ಸ್ನೇಹ ಬಳಗದ ಅಧ್ಯಕ್ಷ ಬಿ.ಶೃಂಗೇಶ್ವರ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಹಾಸ್ಯ ಸಾಹಿತ್ಯ ಕ್ಷೇತ್ರ ಎನ್.ರಾಮನಾಥ್, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಚ್.ಎಸ್.ರಾಮಣ್ಣ, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಟಿ.ಎಸ್.ನಾಗರಾಜ್‍ಶೆಟ್ಟಿ, ಚಲನಚಿತ್ರರಂಗದಲ್ಲಿ ವೈಜನಾಥ್ ಬಿರಾದಾರ, ರಂಗಭೂಮಿಯಲ್ಲಿ ಸಿ.ಕೆ.ಪ್ರಸನ್ನಕುಮಾರ್ ಸೇರಿದಂತೆ ಮತ್ತಿತರರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವಿ.ವಿ.ಗೋಪಾಲ್ , ಶ್ರೀಮತಿ ಕೆ.ಮಂಜುಳಾ, ತಾಜ್ ಅಬೂಬಕರ್ ಸಿದ್ಧಿಕ್, ಶ್ರೀಮತಿ ಸಲ್ಮಾತಾಜ್, ದೇವನಾಗೇಶ್, ಶ್ರೀಮತಿ ರತ್ನಾ ನಾಗೇಶ್ ಅವರಿಗೆ ಕನ್ನಡ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.